ಸನ್ಮಾರ್ಗ ವಾರ್ತೆ
ಕೇರಳ,ಜು.28: ವಿದೇಶದಿಂದ ಬಂದು 33 ದಿವಸ ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ಕೊರೋನ ಸೋಂಕು ತಗುಲಿರುವುದು ದೃಢವಾಗಿದೆ. ಇದರೊಂದಿಗೆ ಇವರ ಮಕ್ಕಳ ಸಹಿತ ಏಳು ಕುಟುಂಬ ಸದಸ್ಯರನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಕೋಟ್ಟಕ್ಕಲ್ ಎಡರಿಕ್ಕೋಡ್ ಒಟ್ಟತ್ತಂಙಲ್ ಎಂಬಲ್ಲಿ ಈ ಘಟನೆ ನಡೆದಿದೆ.
ವಿದೇಶದಿಂದ ಬಂದ ಹದಿನಾಲ್ಕು ಮಂದಿಗೆ ಜಿಲ್ಲೆಯಲ್ಲಿ ಸೋಮವಾರ ಕೊರೋನ ದೃಢಪಟ್ಟಿದೆ. ಇವರಲ್ಲಿ ಕುವೈಟ್‍ನಿಂದ ಬಂದ 27 ವರ್ಷದ ಯುವಕನಿಗೆ ರೋಗ ದೃಢಪಟ್ಟಿತ್ತು.
ಕಳೆದ ಜೂನ್ ಹದಿನೆಂಟಕ್ಕೆ ಊರಿಗೆ ಬಂದ ಯುವತಿ ಸ್ವಂತ ಮನೆಯಲ್ಲಿದ್ದರು. ಒಂದು ತಿಂಗಳ ಬಳಿಕ ಕಳೆದ ಹದಿನೆಂಟರಂದು ಚಿಕಿತ್ಸೆಯ ಭಾಗವಾಗಿ ಗಂಟಲ ದ್ರವ ಪರೀಕ್ಷಿಸಲಾಗಿತ್ತು.
ಸೋಮವಾರ ಬೆಳಗ್ಗೆ ಪಾಸಿಟಿವ್ ಆಗಿ ಫಲಿತಾಂಶ ಬಂದಿದೆ. ಇದೇ ವೇಳೆ, ಮಹಿಳೆಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಒಂದು ತಿಂಗಳು ಮೂರು ದಿನವಾದ ಬಳಿಕ ಕೊರೋನ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಓದುಗರೇ, ಸನಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












