ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.28: ಜಗತ್ತು ನಿರೀಕ್ಷೆಯೊಂದಿಗೆ ಎದುರು ನೋಡುತ್ತಿರುವ ಕೊರೊನ ವೈರಸ್ ವ್ಯಾಕ್ಸಿನ್ ಹಲವು ದೇಶಗಳು ಅಭಿವೃದ್ಧಿ ಪಡಿಸಲು ಯತ್ನಿಸಿದರೂ ಆಕ್ಸ್‌ಫರ್ಡ್ ಯುನಿವರ್ಸಿಟಿಯ ಸಂಶೋಧಕರು ಅಭಿವೃದ್ಧಿ ಪಡಿಸಿದ ವಿಷಯಕ್ಕೆ ಸಂಬಂಧಿಸಿ ಹೊರಬ ಹೊರಬಂದ ವರದಿಗಳು ಗಮನಾರ್ಹವಾಗಿದೆ. ಈ ವ್ಯಾಕ್ಸಿನ್‍ನ ಮೂರನೆ ಮತ್ತು ಕೊನೆಯ ಪರೀಕ್ಷೆಯು ಭಾರತದಲ್ಲಿ ಐದು ಕಡೆಗಳಲ್ಲಿ ನಡೆಸಲಾಗುವುದೆಂದು ಎಂದು ಬಯೊಟೆಕ್ನಾಲಜಿ ಇಲಾಖೆ(ಡಿಬಿಟಿ) ಲತಿಳಿಸಿದೆ.
ಹರಿಯಾಣದ ಇಂಕ್ಲೇನ್ ಟ್ರಸ್ಟ್ ಇಂಟರ್ ನ್ಯಾಶನಲ್, ಪುಣೆಯ ಕೆಇಎಂ, ಹೈದರಾಬಾದಿನ ಸೊಸೈಟಿ ಫಾರ್ ಹೆಲ್ತ್ ಅಲೈಡ್ ರಿಸರ್ಬ್, ಚೆನ್ನೈಯ ನ್ಯಾಶನಲ್ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಾಲಜಿ, ತಮಿಳ್ನಾಡಿನ ವೆಲ್ಲೂರ್ ಕ್ರಿಸ್ಚಿಯನ್ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಕ್ಸಿನ್ ಪರೀಕ್ಷೆ ನಡೆಯಲಿದೆ. ನ್ಯಾಶನಲ್ ಬಯೋಫಾರ್ಮ ಮಿಶನ್ ಗ್ರಾಂಡ್ ಚ್ಯಾಲೆಂಜರ್ಸ್ ಇಂಡಿಯಾ ಪ್ರೋಗ್ರಾಮ್ ಆಗಿ ಐದು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಡಿಬಿಟಿ ಕಾರ್ಯದರ್ಶಿ ತಿಳಿಸಿದರು.
ಪ್ರತಿರೋಧ ವ್ಯಾಕ್ಸಿನ್ ತಯಾರಾದರೆ, ಅದರ ಉತ್ಪಾದನೆಗಾಗಿ ಜಗತ್ತಿನ ಅತ್ಯಂತ ದೊಡ್ಡ ವ್ಯಾಕ್ಸಿನ್ ನಿರ್ಮಾತೃಗಳಾದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್‌ಫರ್ಡ್, ಅದರ ಪಾಲುದಾರ ಅಸ್ಟ್ರಾಸೆನಕನ್ನು ಆಯ್ಕೆ ಮಾಡಲಾಗಿದೆ. ಪರೀಕ್ಷೆಯ ಆದ್ಯ ಎರಡು ಹಂತದ ಪರೀಕ್ಷೆಯ ಫಲಿತಾಂಶವೂ ಈ ತಿಂಗಳ ಮೊದಲಲ್ಲಿ ಪ್ರಕಟಿಸಲಾಗಿತ್ತು. ವ್ಯಾಕ್ಸಿನ್ ಖರೀದಿಸಲು ಸಾಧ್ಯವಿರುವ ಬೆಲೆಗೆ ಲಭ್ಯಗೊಳಿಸಲು ಸಾಧ್ಯವಿದೆ ಎಂದು ಸೆರಂ ಇನ್ಸ್ಟಿಟ್ಯೂಟ್ ನಿರೀಕ್ಷಿಸಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












