ಭೀಮಾ ಕೋರೆಗಾಂವ್ ಪ್ರಕರಣ: ದಿಲ್ಲಿ ವಿವಿ ಪ್ರಾಧ್ಯಾಪಕ ಹನಿ ಬಾಬು ಬಂಧನ

0
523

ಸನ್ಮಾರ್ಗ ವಾರ್ತೆ

ನವದೆಹಲಿ,ಜು.28: ಭೀಮಾ ಕೋರೆಗಾಂವ್ ಯಲಗಾರ್ ಪರಿಷತ್ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯ ಪ್ರೊಫೆಸರ್ ಹನಿ ಬಾಬು ಎಂ.ಟಿ ಅವರನ್ನು ಎನ್ಐಎ ಬಂಧಿಸಿದೆ. ಡಿಯು ಪ್ರಾಧ್ಯಾಪಕರಾದ ಹನಿ ಬಾಬು ಮಾವೋವಾದಿ ಸಿದ್ಧಾಂತವನ್ನು ಹರಡಿದ್ದಾರೆ ಎಂದು ಎನ್ಐಎ ಆರೋಪಿಸಿದೆ.

ಡಿಯು ಪ್ರೊಫೆಸರ್ ಹನಿ ಬಾಬು ಉತ್ತರಪ್ರದೇಶದ ಗೌತಮ್ ಬುದ್ಧ ನಗರ ನಿವಾಸಿ ಎಂದು ಎನ್ಐಎ ವಕ್ತಾರರು ತಿಳಿಸಿದ್ದು, ಅವರು ದಿಲ್ಲಿ ಯುನಿವರ್ಸಿಟಿಯ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಎನ್ಐಎ ಮೂಲಗಳ ಪ್ರಕಾರ, ಹನಿ ಬಾಬು ಅವರು ನಕ್ಸಲ್ ಚಟುವಟಿಕೆಗಳನ್ನು ಮತ್ತು ಮಾವೋವಾದಿ ಸಿದ್ಧಾಂತವನ್ನು ಉತ್ತೇಜಿಸುತ್ತಿದ್ದಾರೆ ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ ಎಂದು ಆರೋಪಿಸಿದೆ.

ಹನಿ ಬಾಬು ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದರು, ಅವರನ್ನು ಬುಧವಾರ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಎನ್‌ಐಎ, ಈ ವರ್ಷ ಜನೆವರಿಯಲ್ಲಿ ಎನ್‌ಐಎ ಈ ಪ್ರಕರಣದ ತನಿಖೆ ಆರಂಭಿಸಿತ್ತಲ್ಲದೇ, ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನೌಲಖಾ ಅವರನ್ನು ಏಪ್ರಿಲ್ 14 ರಂದು ಬಂಧಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.