ಸಿಂಧ್ಯಾರನ್ನು ಮುಖ್ಯಮಂತ್ರಿ ಎಂದ ತುಳಸಿ ಸಿಲಾವತ್- ವಿಡಿಯೋ ವೈರಲ್

0
531

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ತುಳಸಿ ಸಿಲಾವತ್ ಅವರ ನಾಲಿಗೆ ಮತ್ತೆ ಜಾರಿದೆ. ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಜ್ಯೋತಿರಾದಿತ್ಯ ಸಿಂಧ್ಯಾಅವರನ್ನು ಮಧ್ಯಪ್ರದೇಶದ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ವೀಡಿಯೊ ಹೊರಬಂದ ನಂತರ ಕಾಂಗ್ರೆಸ್ ಸಿಲಾವತ್‌ರವರನ್ನು ವ್ಯಂಗ್ಯಾತ್ಮಕವಾಗಿ ಟೀಕಿಸಿದ್ದು,

ಶಿವರಾಜ್ ಅನಾರೋಗ್ಯವೇನಾಯಿತು- ಸಿಲಾವತ್ ಸಿಂಧ್ಯಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು…!
ಶಿವರಾಜ್ ಮತ್ತು ಮೋದಿಜಿ ಅವರನ್ನು ಸಮಾಜಕ್ಕೆ ಕಳಂಕವೆಂದು ಹೇಳಿದ ನಂತರ, ತುಳಸಿ ಸಿಲಾವತ್ ಅವರು ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು 15 ದಿನಗಳಲ್ಲಿಯೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ.
ಸಿಲಾವತ್‌ಜಿ, ಶಿವರಾಜ್‌ಜಿ ಆಸ್ಪತ್ರೆಗೆ ಏನು ಹೋದರು, ನೀವು ವಿಷಯವನ್ನೇ ಬದಲಾಯಿಸಲು ಪ್ರಾರಂಭಿಸಿದ್ದೀರಾ ..? ಎಂದು ಟ್ವೀಟ್ ಮಾಡಿದೆ.

“ಮಹಾರಾಜ್ ಮುಖ್ಯಮಂತ್ರಿ ಮತ್ತು ಶಿಷ್ಯರು ಉಪಮುಖ್ಯಮಂತ್ರಿಯಾಗುತ್ತಾರೆ, ಆದ್ದರಿಂದ ಬಿಜೆಪಿ ಜನರು ದೇವಾಲಯದ ಗಂಟೆ ಬಾರಿಸುತ್ತಾರೆಯೇ?” ಎಂದು ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ಅವರು ಟ್ವೀಟ್ ‌ಮಾಡಿದ್ದಾರೆ.

ದರೋಡೆಕೋರ ವಿಕಾಸ್ ದುಬೆ ಅವರ ಎನ್‌ಕೌಂಟರ್ ಪ್ರಕರಣದಲ್ಲಿ ಸಚಿವ ಸಿಲಾವತ್ ಪ್ರಧಾನಿ ಮೋದಿ, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಯೋಗಿ ಆದಿತ್ಯನಾಥ್‌ರನ್ನು ಸಮಾಜಕ್ಕೆ ಕಳಂಕ ಎಂದು ಹೇಳಿದ್ದರು. ತದನಂತರ ಈ ಕುರಿತು ಸ್ವಷ್ಟೀಕರಣ ನೀಡುತ್ತಾ ವಿಡಿಯೋವನ್ನು ತಿರುಚಲಾಗಿದೆ ಎಂದು ಹೇಳಿದ್ದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.