ಸನ್ಮಾರ್ಗ ವಾರ್ತೆ
ಲಂಡನ್,ಜು.28: ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಇಂಗ್ಲೆಂಡಿನಲ್ಲಿ ಮೊದಲ ಬಾರಿ ಸಾಕು ಪ್ರಾಣಿಯೊಂದಕ್ಕೆ ಕೊರೋನಾ ಇರುವುದಾಗಿ ದೃಢಪಟ್ಟಿದೆ.
ಸರೆ ಕೌಂಟಿಯ ಕುಟುಂಬವೊಂದು ಈ ಬೆಕ್ಕನ್ನು ಸಾಕಿತ್ತು. ಇಂಗ್ಲೆಂಡಿನ ಪ್ರಾಣಿಗಳ ಇಲಾಖೆಯ ಮುಖ್ಯಸ್ಥರು ಬೆಕ್ಕಿಗೆ ಕೊರೋನಾ ಸೋಂಕು ತಗಲಿರುವುದಾಗಿ ಬಹಿರಂಗಗೊಳಿಸಿದ್ದಾರೆ.
“ಪ್ರಾಣಿಗಳಲ್ಲಿ ರೋಗ ದೃಢಗೊಂಡ ದೇಶದ ಮೊದಲ ಪ್ರಕರಣ ಇದು. ಈ ಬೆಕ್ಕಿನಿಂದ ಇತರರಿಗೆ ಕೊರೋನಾ ಹರಡಿದ್ದು ಈವರೆಗೆ ದೃಢವಾಗಿಲ್ಲ ಎಂದು ಪರಿಸರ ಸಚಿವಾಲಯ ತಿಳಿಸಿದೆ.
ಕಜ್ಜಿ ಇದ್ದ ಬೆಕ್ಕಿನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಕೊರೋನಾ ಇರುವುದಾಗಿ ದೃಢಪಟ್ಟಿದೆ. ಇಂಗ್ಲೆಂಡಿನಲ್ಲಿ ಇದು ಮೊದಲ ಘಟನೆಯಾದರೂ ಅಮೇರಿಕಾ ಮತ್ತು ಇತರ ಕೆಲವು ದೇಶಗಳಲ್ಲಿ ಪ್ರಾಣಿಗಳಿಂದ ವೈರಸ್ ಹರಡುತ್ತಿದೆ ಎಂದು ಇತ್ತು ವರದಿಗಳು ಬಂದಿದ್ದವು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












