ಯುಪಿಎಸ್‌ಸಿ ಪರೀಕ್ಷೆಯಲ್ಲಿ 420ನೆ ರ‌್ಯಾಂಕ್: ರಾಹುಲ್ ಮೋದಿ ಟ್ವಿಟ್ಟರ್ ಟ್ರೆಂಡ್!

0
686

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.5: ಈ ಬಾರಿ ಸಿವಿಲ್ ಸರ್ವಿಸ್ ಪರೀಕ್ಷೆ ಫಲಿತಾಂಶ ಬಂದಾಗ 420ನೆ ರ‌್ಯಾಂಕ್ ಪಡೆದ ರಾಹುಲ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನೊಂದಿಗೆ ಪ್ರಖ್ಯಾತರಾಗಿದ್ದಾರೆ.

ಶತಮಾನಗಳ ವಿಲಯನ್ ಎಂಬ ಹೆಸರಿನಲ್ಲಿ ಈ ವ್ಯಕ್ತಿಯ ಹೆಸರನ್ನು ಸೂಚಿಸಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪ್ಪಿ ಹಿಡಿದ ಫೋಟೊ ಈ ಜನಾಕರ್ಷಣೆಗೆ ಗುರಿಯಾಗಿದೆ.

ಸಿವಿಲ್ ಸರ್ವಿಸ್ ರ್ಯಾಂಕ್ ಪಟ್ಟಿಯಲ್ಲಿ ರಾಹುಲ್ ಮೋದಿ ಇದ್ದಾರೆ. 6312980 ರೋಲ್ ನಂಬರಿನಲ್ಲಿ ಪರೀಕ್ಷೆ ಬರೆದ ರಾಹುಲ್ ಮೋದಿ ಸಿವಿಲ್ ಸರ್ವಿಸ್ ಪಾಸಾಗುವುದರೊಂದಿಗೆ ತನ್ನ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.

ಹೆಸರಿನ ವಿಶೇಷತೆಯಿಂದ ಟ್ವೀಟರಿನಲ್ಲಿ ರಾಹುಲ್ ಮೋದಿ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗಿದೆ. ನಂತರ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರ ಫೋಟೋ ಉಪಯೋಗಿಸಿ ಟ್ರೋಲ್‍ಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಿಕೊಂಡಿದೆ. ರಾಜಕೀಯವಾಗಿ ವಿರುದ್ಧವಾಗಿರುವ ಇಬ್ಬರು ಪ್ರಧಾನ ನಾಯಕರ ಹೆಸರನ್ನು ಈ ವ್ಯಕ್ತಿ ಇಟ್ಟುಕೊಂಡಿರುವುದು ಕೆಲವರಿಗೆ ಕುತೂಹಲ ಸೃಷ್ಟಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.