ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.5: ಬಾಬರಿ ಮಸೀದಿ ಒಂದು ಮಸೀದಿಯಾಗಿತ್ತು ಯಾವಾಗಲೂ ಅದು ಮಸೀದಿಯಾಗಿಯೇ ಇರುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಕಾನೂನು ಬಾಹಿರವಾಗಿ ಹಕ್ಕನ್ನು ತೆರವುಗೊಳಿಸಿದ್ದರಿಂದ ಸತ್ಯ ಬದಲಾಗುವುದಿಲ್ಲ ಎಂದು ವೈಯಕ್ತಿಕ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಭೂಮಿಯಲ್ಲಿ ಒಂದು ಮಂದಿರದ ಶಿಲಾನ್ಯಾಸ ಕಾರ್ಯ ನಡೆಯುತ್ತಿರುವಾಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ತನ್ನ ಐತಿಹಾಸಿಕ ನಿಲುವನ್ನು ಪುನರುಚ್ಚರಿಸುತ್ತಿದೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಿ ತಿಳಿಸಿದ್ದಾರೆ.
ಇಸ್ಲಾಮಿಕ್ ಶರೀಅತ್ ಪ್ರಕಾರ ಒಂದು ಸ್ಥಳದಲ್ಲಿ ಮಸೀದಿಯಿದ್ದರೆ ಲೋಕಾಂತ್ಯದವರೆಗೂ ಅದು ಮಸೀದಿಯಾಗಿ ಇರುತ್ತದೆ. ಆದ್ದರಿಂದ ಹಿಂದೆ ಮಸೀದಿಯಾಗಿದ್ದ ಬಾಬರಿ ಮಸೀದಿ ಇಂದೂ ಮಸೀದಿಯಾಗಿಯೇ ಮುಂದುವರಿಯುವುದು ಎಂದು ಮಂಡಳಿ ಹೇಳಿತು.
ಮಸೀದಿಯೊಳಗೆ ವಿಗ್ರಹ ಇರಿಸಿದುದರಿಂದಲೋ ಪೂಜೆ ಮಾಡಿದರಿಂದಲೋ ಬಹಳಷ್ಟು ಸಮಯ ನಮಾಝ್ ನಿರ್ವಹಿಸಿದ ಮಸೀದಿಯೆಂಬ ಅವಸ್ಥೆಗೆ ಬದಲಾವಣೆ ಬರುವುದಿಲ್ಲ. ಯಾವುದೋ ದೇವಸ್ಥಾನವನ್ನೊ ಹಿಂದೂ ಆರಾಧನಾ ಸ್ಥಳವನ್ನೋ ಕೆಡವಿ ಬಾಬರಿ ಮಸೀದಿ ಕಟ್ಟಿದ್ದಲ್ಲ ಎಂಬ ತಮ್ಮ ನಿಲುವು ನವೆಂಬರ್ 9ರ ತೀರ್ಪಿನಲ್ಲಿ ಸುಪ್ರೀಂಕೋರ್ಟು ಎತ್ತಿ ಹಿಡಿದಿದೆ.
ಬಾಬರಿ ಮಸೀದಿಯ ಜಮೀನಿನ ಉತ್ಖನನ ನಡೆಸಿ ಸಿಕ್ಕಿದೆಯೆನ್ನಲಾದ ಅವಶೇಷಗಳು ಕೂಡ ಮಸೀದಿ ನಿರ್ಮಿಸುವುದಕ್ಕಿಂತ 400 ವರ್ಷ ಮುಂಚಿನ ಹನ್ನೆರಡನೇ ಶತಮಾನದ್ದೆಂದು ಸುಪ್ರೀಂಕೋರ್ಟು ಹೇಳಿದೆ.
ಮಂದಿರ ಕೆಡವಿ ಮಸೀದಿ ಕಟ್ಟಿಲ್ಲ ಎಂದು ಅರ್ಥ ಇದು. 1949 ಡಿಸೆಂಬರ್ 22ರವರೆಗೆ ಬಾಬರಿ ಮಸೀದಿಯೊಳಗೆ ನಮಾಝ್ ನಡೆದಿತ್ತು ಎಂದು ಸುಪ್ರೀಂಕೋರ್ಟು ತಿಳಿಸಿದೆ. ಅಂದು ರಾತ್ರೆ ಮಸೀದಿಯೊಳಗೆ ವಿಗ್ರಹ ತಂದು ಇಡಲಾಯಿತು. ಕಾನೂನು ಬಾಹಿರ ಪ್ರವೃತ್ತಿ ಇದೆಂದು 1992ರಲ್ಲಿ ಡಿಸೆಂಬರ್ 6ಕ್ಕೆ ಬಾಬರಿ ಮಸೀದಿ ನಾಶಪಡಿಸಿದ್ದು ಸಂವಿಧಾನ ವಿರೋಧೀ ಕ್ರಿಮಿನಲ್ ಕೃತ್ಯವೆಂದು ಸುಪ್ರೀಂಕೋರ್ಟಿನ ತೀರ್ಪಿನಲ್ಲಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












