ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಎತ್ತುವ ಚೈನದ ಶ್ರಮವನ್ನು ವಿಫಲಗೊಳಿಸಿದ ಭಾರತ

0
463

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 6: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕಾಶ್ಮಿರ ವಿಷಯವನ್ನು ಎತ್ತಲು ಚೀನ ಶ್ರಮಿಸಿದ್ದು, ಭಾರತ ತಡೆದಿದೆ. ದೇಶದ ಆಂತರಿಕ ವಿಷಯಗಳಲ್ಲಿ ಬೀಜಿಂಗಿನ ಹಸ್ತಕ್ಷೇಪಕ್ಕೆ ಭಾರತದ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ.

“ಭಾರತದ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚರ್ಚಿಸುವುದಕ್ಕೆ ಚೀನ ಪ್ರಯತ್ನಿಸಿತು. ಭಾರತದ ಆಂತರಿಕ ವಿಷಯಕ್ಕೆ ಸಂಬಂಧಿಸಿ ಯಾವುದೇ ವಿಷಯವನ್ನು ಎತ್ತಲು ಚೀನ ಈ ಹಿಂದೆಯೂ ಯತ್ನಿಸಿತ್ತು. ಹಿಂದಿನಂತೆ ಚೀನದ ಕ್ರಮಕ್ಕೆ ಅಂತಾರಾಷ್ಟ್ರೀಯ ಸಮೂಹದ ಬೆಂಬಲ ದೊರಕಲಿಲ್ಲ.

ಭಾರತದ ಆಂತರಿಕ ವಿಷಯಗಳಲ್ಲಿ ಚೀನದ ಹಸ್ತಕ್ಷೇಪವನ್ನು ಬಲವಾಗಿ ನಿರಾಕರಿಸಲಾಗುವುದು. ಚೀನ ಇಂತಹ ಯತ್ನಗಳಿಂದ ದೂರವಿರಬೇಕೆಂದು ವಿದೇಶ ಸಚಿವಾಲಯ ತಿಳಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.