ಅಯೋಧ್ಯೆ ಶಿಲಾನ್ಯಾಸ: ಮಂದಿರ ನಿರ್ಮಾಣ ಟ್ರಸ್ಟ್ ಅಧ್ಯಕ್ಷರಿಗೆ ಕೊರೋನ

0
618

ಸನ್ಮಾರ್ಗ ವಾರ್ತೆ

ಲಕ್ನೊ,ಆ.13: ಅಯೋಧ್ಯೆಯ ರಾಮ ಮಂದಿರ ಭೂಮಿಪೂಜೆಯಲ್ಲಿ ಪ್ರಧಾನಿಯೊಂದಿಗೆ ಭಾಗವಹಿಸಿದ್ದ ರಾಮಮಂದಿರ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ ದಾಸ್‍ರಿಗೆ ಕೊರೋನ ಸೋಂಕು ತಗುಲಿರುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಇದನ್ನು ತಿಳಿಸಿದೆ. ನೃತ್ಯ ಗೋಪಾಲ ದಾಸ್‍ಗೆ ತುರ್ತು ಚಿಕಿತ್ಸೆ ಕೊಡಲು ಸೂಚಿಸಿರುವುದಾಗಿ ಕಚೇರಿ ತಿಳಿಸಿದೆ.

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯ ನೆರವೇರಿಸಿದ್ದರು. ನೃತ್ಯಗೋಪಾಲದ ದಾಸ್ ಅಲ್ಲದೇ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಪಟೇಲ್, ಮುಖ್ಯಮಂತ್ರಿ ಆದಿತ್ಯನಾಥ್, ಆರೆಸ್ಸಿನ ಮೋಹನ ಭಾಗವತ್ ಮತ್ತು ಪುರೋಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಸೇನೆ ಭಾರೀ ಸುರಕ್ಷೆ ಮಾಡಿಕೊಟ್ಟಿತ್ತು. ಕೊರೋನ ಪ್ರತಿರೋಧ ಮಾನದಂಡಗಳನ್ನು ಪಾಲಿಸಲಾಗಿತ್ತು. ಆದರೂ ನೃತ್ಯಗೋಪಾಲರಿಗೆ ಕೊರೋನ ಸೋಂಕು ತಗುಲಿದೆ. ಕೊರೋನ ದೃಢವಾದುದರಿಂದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರಲಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.