ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಕೊರೋನ ವೈರಸ್ ಮೆದುಳಿಗೆ ಹಾನಿ ಮಾಡುತ್ತದೆ ಅಮೆರಿಕದಲ್ಲಿ ನಡೆದ ಅಧ್ಯಯನವೊಂದರಲ್ಲಿ ಬಯಲಾಗಿದೆ. ಕೊರೋನದಿಂದ ತಲೆನೋವು, ನಿಖರ ಅಭಿಪ್ರಾಯದ ಕೊರತೆ ಇತ್ಯಾದಿ ವೈರಸ್ ಮೆದುಳಿಗೆ ಮಾಡುವ ಹಾನಿಯಿಂದ ಸಂಭವಿಸುತ್ತದೆ ಎಂದು ಬುಧವಾರ ಪ್ರಕಟವಾದ ಅಮೆರಿಕದ ಅಧ್ಯಯನವೊಂದು ಬೆಟ್ಟು ಮಾಡಿದೆ.
ಯೇಲ್ ಯುನಿವರ್ಸಿಟಿಯ ಇಮ್ಮ್ಯುನಾಲಜಿಸ್ಟ್ ಅಕಿಕೊ ಇವಸಾಕಿ ಈ ಕುರಿತು ಅಧ್ಯಯನ ನಡೆಸಿದ್ದು, ಅಧ್ಯಯನ ಪ್ರಾಥಮಿಕ ಹಂತದಲ್ಲಿದೆ. ವೈರಸ್ಗೆ ಮೆದುಳಿನ ಕೋಶದ ಆಕ್ಸಿಜನ್ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಕೊರೋನ ನೇರವಾಗಿ ಮೆದುಳಿಗೆ ಹಾನಿ ಮಾಡುವುದೇ ಎಂಬ ಅಧ್ಯಯನ ತುಂಬ ಮಹತ್ವದೆಂದು ಕ್ಯಾಲಿಫೊರ್ನಿಯ ವಿಶ್ವವಿದ್ಯಾನಿಲಯದ ನ್ಯೂರಾಲಜಿ ಮುಖ್ಯಸ್ಥ ಆಂಡ್ರೂ ಜೋಸಫ್ಸನ್ ಹೇಳಿದ್ದಾರೆ.
ಇವಾಸಾಕಿ ಮತ್ತು ಅವರ ತಂಡ ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಒಂದು ತಂಡ ಇಲಿಗಳ ಶ್ವಾಸಕೋಸಗಳಲ್ಲಿ ವೈರಸ್ ತರುವ ವೈಪರೀತ್ಯಗಳನ್ನು ಇನ್ನೊಂದು ತಂಡ ಇಲಿಗಳ ಮೆದುಳಿನಲ್ಲಿ ವೈರಸ್ ಮಾಡುವ ವೈಪರೀತ್ಯಗಳನ್ನು ಅಧ್ಯಯನಿಸಿತ್ತು. ಮೆದುಳಿಗೆ ವೈರಸ್ ಬಾಧೆ ಕಂಡು ಬಂದರೆ ಬಹಳ ಬೇಗನೆ ದೇಹದ ಭಾರ ಕಡಿಮೆಯಾಗಿ ಸಾವಿಗೂ ಕಾರಣವಾಗುತ್ತದೆ. ರೋಗ ತಗಲಿದ ಭಾಗಗಳ ಟಿ ಕೋಶಗಳಂತಹ ಪ್ರತಿರೋಧ ಕೋಶಗಳು ಉಂಟಾಗದು ಎಂದು ಅಧ್ಯಯನ ತಿಳಿಸಿದೆ.
ಆದರೆ ಇಂತಹ ಅಧ್ಯಯನಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಸಾರ್ಸ್ ವೈರಸ್, ಝಿಕ ವೈರಸ್ ಮೆದುಳಿನ ಕೋಶಗಳಿಗೆ ಹಾನಿ ಮಾಡುತ್ತವೆ ಎಂದು ಈ ಹಿಂದೆ ಸಾಬೀತಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












