ಎಸ್‌ಡಿಪಿಐ ಕಚೇರಿಯಲ್ಲಿ ಮಾರಕಾಸ್ತ್ರ ಪತ್ತೆ: ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ ಕೇಸ್

0
1454

ಸನ್ಮಾರ್ಗ ವಾರ್ತೆ

ಬೆಂಗಳೂರಿನ: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಎಸ್‌ಡಿಪಿಐ ಕಚೇರಿಗಳ ಪರಿಶೋಧನೆ ನಡೆಸಿರುವುದನ್ನು ಕೆಲವು ಮಾಧ್ಯಮಗಳು “ಎಸ್‌ಡಿಪಿಐ ಕಚೇರಿ ಮೇಲೆ ದಾಳಿ, ಮಾರಕಾಸ್ತ್ರಗಳು ಪತ್ತೆ ಎಂಬ ಕಪೋಲಕಲ್ಪಿತ ಸುಳ್ಳು ವರದಿಯನ್ನು ಬಿತ್ತರಿಸಿದ್ದವು. ಪೋಲೀಸ್ ಪರಿಶೋಧನೆಯ ಪಂಚನಾಮೆಯನ್ನು ಪರಿಶೀಲಿಸಿದಾಗ ಯಾವುದೇ ಮಾರಕಾಸ್ತ್ರಗಳ ಉಲ್ಲೇಖ ಅದರಲ್ಲಿ ಇಲ್ಲ ಎಂದು ಹೇಳಿರುವ ಎಸ್‌ಡಿಪಿಐ, ಸುದ್ದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಎಸ್ಡಿಪಿಐ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಲು ಹಾತೊರೆಯುತ್ತಿರುವ ಕೆಲವು ಮಾಧ್ಯಮಗಳು ನಿರಂತರವಾಗಿ ಪಕ್ಷವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನವನ್ನು ಮಾಡುತ್ತಿವೆ.

ಕೆಲ ರಾಜಕೀಯ ಪಕ್ಷಗಳ ಒತ್ತಾಸೆ ಮತ್ತು ನಿರ್ದಿಷ್ಟ ಪೂರ್ವಾಗ್ರಹಗಳಿಂದ ಎಸ್ಡಿಪಿಐಯನ್ನು ಗುರಿಪಡಿಸಿ ಸಮಾಜದ ದಾರಿ ತಪ್ಪಿಸಲು ಅವುಗಳು ಮಗ್ನವಾಗಿವೆ. ಇದೀಗ ಇಂತಹ ಮಾಧ್ಯಮಗಳ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮಕ್ಕೆ ಪಕ್ಷ ಮುಂದಾಗಿದೆ ಎಂದು ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.