ಡಾ| ಮೆಹ್ರೀನ್ ಫಾರೂಕಿ: ಆಸ್ಟ್ರೇಲಿಯನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಮುಸ್ಲಿಮ್ ಮಹಿಳೆ

0
1075
ಡಾ| ಮೆಹ್ರೀನ್ ಫಾರೂಕಿ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸಂಸತ್ತಿಗೆ ಮೊತ್ತ ಮೊದಲ ಬಾರಿಗೆ ಮುಸ್ಲಿಮ್ ಮಹಿಳೆ ಯೋರ್ವರು ಆಯ್ಕೆಯಾಗಿದ್ದಾರೆ.
ಸೌತ್ ವೇಲ್ಸ್ ನ ಗ್ರೀನ್ಸ್ ಪಾರ್ಟಿಯ ಸಂಸದರಾಗಿರುವ ಮೆಹ್ರೀನ್ ಫಾರೂಕಿಯವರು ಪಾಕಿಸ್ತಾನಿ ಮೂಲದವರಾಗಿದ್ದು, ಆಸ್ಟ್ರೇಲಿಯನ್ ಸೆನೆಟ್‍ನಲ್ಲಿ ಖಾಲಿಯಾಗಿದ್ದ ಶಾಸಕಾಂಗ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಈ ಕುರಿತು ಆಸ್ಟ್ರೇಲಿಯನ್ ಸೆನೆಟ್ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ. “ಸಂಸದ ಲೆರ್ಹೀಯನ್ನಾನ್‍ರವರು ರಾಜಿನಾಮೆ ನೀಡಿದ ಸ್ಥಾನಕ್ಕೆ ನ್ಯೂ ಸೌತ್ ವೇಲ್ಸ್ ನ ಸಂಸದರಾದ ಡಾ| ಮೆಹ್ರೀನ್ ಫಾರೂಕೀಯವರನ್ನು ಸಂಸತ್ತು ಆಯ್ಕೆ ಮಾಡಿದೆ” ಎಂದಿದೆ. ಆಸ್ಟ್ರೇಲಿಯನ್ ಸೆನೆಟ್‍ಗೆ ಆಯ್ಕೆಯಾದ ಮೊದಲ ಮುಸ್ಲಿಮ್ ಮಹಿಳೆ ಎಂಬ ಹೆಗ್ಗಳಿಕೆಗೆ ಡಾ| ಮೆಹ್ರೀನ್ ಫಾರೂಕಿ ಭಾಜನರಾಗಿದ್ದಾರೆ.