ಪ್ರಳಯ ಸಮಾನ ದುರಂತ ಬಂದೆರಗಿದಾಗ ಅದಕ್ಕೆ ಸಿಕ್ಕಿ ನಲುಗಿದವರ ನೆರವಿಗೆ ಧಾವಿಸುವುದು ಜಗತ್ತಿನಲ್ಲಿ ಎಲ್ಲೆಲ್ಲೂ ಕಾಣುವ ಸಾಮಾನ್ಯ ದೃಶ್ಯವಾಗಿದೆ. ಆದರೆ ಸಂಘಪರಿವಾರದ ಕೆಲವರಿಂದ ವಿಪರೀತ ವರ್ತನೆಯ ವಿಶೇಷ ದೃಶ್ಯಗಳು ಕೇರಳದ ಮಳೆ ಹಾನಿ ಜಲಪ್ರಳಯಕ್ಕೆ ಸಂಬಂಧಿಸಿ ಕಾಣಲು ಸಾಧ್ಯವಾಯಿತು. ಕರ್ನಾಟಕದ ಬಿಜೆಪಿ ಮುಖಂಡ ಯತ್ನಾಳ್, ‘ಕೇರಳದಲ್ಲಿ ಬಹಿರಂಗವಾಗಿ ಬೀಫ್ ಕತ್ತರಿಸುವುದರಿಂದ ಜಲಪ್ರಳಯ ಆಗಿದೆ’ ಎಂದು ದ್ವೇಷಭರಿತ ಆವೇಶದಲ್ಲಿ ಹೇಳಿದರು. ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಮುಂತಾದವರೆಲ್ಲ ಕೇರಳದ ಸಂತ್ರಸ್ತರ ಪರ ಒಗ್ಗಟ್ಟು ಘೋಷಿಸಿದ್ದು, ಇದೇ ವೇಳೆ ಇಂತಹ ಅಪಸ್ವರಗಳು ಗರಿಗೆದರಿ ನಿಂತವು ಎನ್ನುವುದಕ್ಕೆ ಸಂಘ ಪರಿವಾರದ ಈ ನಾಯಕರ ಮನಸ್ಥಿತಿಗೆ ಮರುಕಪಡದೆ ಬೇರೆ ದಾರಿಯಿಲ್ಲ.
ಬಿಜೆಪಿಯ ಯತ್ನಾಳ್, `ಬೀಫ್ ತಿನ್ನದ ಹಿಂದೂಗಳಿಗೆ ಮಾತ್ರ ಸಹಾಯ ಮಾಡಿ’ ಎಂದ ಹಿಂದೂ ಮಹಾಸಭಾದ ಚಕ್ರಪಾಣಿ, ಸಾಲದ್ದಕ್ಕೆ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ತನ್ನ ಚಾನೆಲ್ ನಲ್ಲಿ ‘ಯುಎಇಯ ಹಣ ನೆರವಿನ ಕುರಿತು ಚರ್ಚೆಯ ವೇಳೆ ಕೇರಳೀ ಯರನ್ನು ಲಜ್ಜೆಗೇಡಿ’ಗಳೆಂದದ್ದನ್ನೆಲ್ಲ ಮುಂದಿಟ್ಟು ಗಮನಿಸುವಾಗ ಇಂತಹ ಮನಸ್ಥಿತಿಯವರು ಎಷ್ಟೇ ದೊಡ್ಡದಿದ್ದರೂ ಮರಕಪಡುವುದೊಂದು ಬಿಟ್ಟು ಗತ್ಯಂತರವಿಲ್ಲ ಎಂದು ಅನಿಸುತ್ತದೆ.
ಸ್ವಾಮಿ ಚಕ್ರಪಾಣಿ
ಬೀಫ್ ವ್ಯಾಪಾರದಲ್ಲಿ ಬ್ರೆಝಿಲ್ ನೊಂದಿಗೆ ಪೈಪೋಟಿಗಿಳಿದಿರುವ ಭಾರತ ಇನ್ನೇನು ಇದರಲ್ಲಿ ಪ್ರಥಮ ಸ್ಥಾನಕ್ಕೆ ತಲುಪಲಿದೆ ಎನ್ನುವಾಗ ಬಿಜೆಪಿ ಸರ ಕಾರಕ್ಕೆ ಸಂಬಂಧಿಸಿದವರು ಪ್ರಕೃತಿ ವಿಕೋಪದೊಂದಿಗೆ ಬೀಫ್ ಸೇವನೆಯನ್ನು ತಳಕು ಹಾಕುವುದಾದರೆ, ಇಡೀ ದೇಶವೇ ನೆರೆಯಲ್ಲಿ ಕೊಚ್ಚಿ ಹೋಗಬೇಕಿತ್ತಲ್ಲ. ಯಾಕೆಂದರೆ ಮುಂಬೈ, ಉತ್ತರ ಭಾರತಗಳಲ್ಲೇ ದನವನ್ನು ಕತ್ತರಿಸಿ ಅದರ ಮಾಂಸಗಳನ್ನು ವಿದೇಶಕ್ಕೆ ಬಿಜೆಪಿ ಸರ ಕಾರದ ಅನುಮತಿಯೊಂದಿಗೆ ಬಿಜೆಪಿ ಪ್ರಮುಖರನ್ನೊಳಗೊಂಡ ಕಂಪೆನಿಗಳು ರಫ್ತು ಮಾಡುತ್ತಿವೆ. ಹಾಗೆ ಹೇಳುವುದಾ ದರೆ ಇದಕ್ಕೆಲ್ಲ ಸಮ್ಮತಿ ಕೊಟ್ಟ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರಕಾರ, ಮುಖ್ಯವಾಗಿ ಕೇಂದ್ರ ಸರಕಾರ ಬೀಫ್ ಶಾಪಕ್ಕೆ ತುತ್ತಾಗಿ ಜಲಪ್ರಳಯದಲ್ಲಿ ಮುಳುಗಿ ಹೋಗಬೇಕಿತ್ತಲ್ಲ. ಹಾಗೆಲ್ಲ ಆಗಿಲ್ಲ. ಅಂದರೆ ಜಲಪ್ರಳಯಕ್ಕೂ ಬೀಫ್ ಮಾಂಸಕ್ಕೂ ಸಂಬಂಧ ಇಲ್ಲ ಎಂರ್ಥವಲ್ಲವೇ.
ಬಸನಗೌಡ ಪಾಟೀಲ್ ಯತ್ನಾಳ್ , ಬಿಜೆಪಿ ನಾಯಕ
ಹಾಗಿದ್ದರೆ ಇನ್ನಷ್ಟು ಕಾಲ ಸಂಘಪರಿ ವಾರದ ಜನರು ಬೀಫ್ನೊಂದಿಗೆ ರಾಜಕೀಯ ಮಾಡುತ್ತ ಅಧಿಕಾರ ಸವಿಯನ್ನು ಕಳೆಯಬಹುದು ಅಷ್ಟೇ. ಗೋವಾದಲ್ಲಿ ಬೀಫ್ ನಿಷೇಧ ಸಾಧ್ಯವಿಲ್ಲ. ಅದಕ್ಕೆ ತಡೆಯೊಡ್ಡಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ. ಮೊನ್ನೆ ಮೊನ್ನೆ ಅವರು ವಿದೇಶಕ್ಕೆ ಹೋಗಿ ತನ್ನ ರೋಗಕ್ಕೆ ಚಿಕಿತ್ಸೆ ಮಾಡಿಸಿ ಕೊಂಡು ಬಂದು ಹುಷಾರಾಗಿದ್ದಾರೆ. ಅವರು ನೂರ್ಕಾಲ ಬಾಳಲಿ. ಹಾಗಿದ್ದರೆ ಮನೋಹರ್ ಪಾರಿಕ್ಕರ್ ರೋಗಕ್ಕೆ ಈ ಮಂದಿ ಬೀಫ್ ಕತ್ತರಿಸಿ ಅಲ್ಲಿ ತಿನ್ನುವುದೇ ಬಹುದೊಡ್ಡ ಕಾರಣವೆಂದು ಹೇಳುವ ಧೈರ್ಯ ಮಾಡಿಲ್ಲ? ಅಥವಾ ಅವರ ರೋಗಕ್ಕೂ ಜಲಪ್ರಳಯಕ್ಕೂ ಸಂಬಂಧವಿಲ್ಲ ಎಂದು ಗೋ ಮಾಂಸ ವಿರೋಧಿಗಳಿಗೆ ಮನೋಹರ್ ಪಾರಿಕ್ಕರ್ ವಿಷಯದಲ್ಲಿ ಸತ್ಯದರ್ಶನವಾಗಿರಬಹುದು.
ಒಂದು ವೇಳೆ ಮನೋಹರ್ ಪಾರಿಕ್ಕರ್ರ ರೋಗಕ್ಕೂ ಗೋವಾದಲ್ಲಿ ಬೀಫ್ ಕತ್ತರಿಸಿ ತಿನ್ನುವುದಕ್ಕೂ ಸಂಬಂಧವಿಲ್ಲ ಎನ್ನುವ ವಾದವಿರುವುದಾದರೆ ಅದೇ ವಾದ ಕೇರಳಕ್ಕೂ ನ್ಯಾಯವಾಗಿ ಅನ್ವಯಿಸುತ್ತದೆ. ಅಂದರೆ ಯತ್ನಾಳ್ ಹೇಳಿದಂತೆ ಬೀಫ್ ಬಹಿರಂಗವಾಗಿ ಕತ್ತರಿಸಿ ತಿಂದದ್ದರಿಂದಾಗಲಿ, ಚಕ್ರಪಾಣಿ ಅಂದಂತೆ ಬೀಫ್ ತಿನ್ನುವುದರಿಂದಾಗಲಿ ಜಲಪ್ರಳಯ ಕೇರಳಕ್ಕೆ ಬಂದದ್ದಲ್ಲ ಎಂದು ಬೀಫ್ನ್ನು ಜಲಪ್ರಳಯಕ್ಕೆ ಜೋಡಿಸಿ ಅಪಸ್ವರ ಎತ್ತಿದವರು ಸಂಘಪರಿವಾರ ಅನಿವಾರ್ಯವಾಗಿ ಒಪ್ಪಬೇಕಾಗುತ್ತದೆ.
ಬಹುಶಃ ಸಂಘಪರಿವಾರದವರಂತೆ ಒಂದೊಕ್ಕೊಂದು ಸಂಬಂಧವಿಲ್ಲದ ವಿಚಾರ ಪ್ರಸ್ತಾಪಿಸಿ ದೇಶದ ದಿಕ್ಕನ್ನು ತಪ್ಪಿಸುವವರು ಬೇರಿಲ್ಲ ಎಂದೆನ್ನಿಸುತ್ತದೆ. ಇಲ್ಲಿನ ಕೆಲವು ಸಮೀಕ್ಷೆಗಳು ಭಾರತದಲ್ಲಿ ಶೇ. 70ರಷ್ಟು ಬೀಫ್ ಮಾಂಸ ಸೇವಿಸುತ್ತಾರೆ ಎಂದು ಹೇಳುತ್ತವೆ. ಪ್ರಳಯದಲ್ಲಿ ಭಾರತದ ಶೇ. 70ರಷ್ಟು ಮಂದಿ ಕೊಚ್ಚಿಹೋಗಬೇಕಿತ್ತು. ಹಾಗಾಗಿಲ್ಲ. ಅಂದರೆ ಬೀಫ್ಗೂ ಪ್ರಕೃತಿ ವಿಕೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದರ್ಥ. ಬೀಫ್ ಶಾಪವನ್ನೇ ಪ್ರಕೃತಿ ವಿಕೋಪಗಳಿಗೆ ಸಮೀಕರಿಸುವುದಾದರೆ ಗೋವನ್ನು ಪವಿತ್ರ ಎನ್ನುವವರ ಪ್ರಾಡೆಕ್ಟೇ ಹೆಚ್ಚಿರುವ ಉತ್ತರಾಖಂಡದಲ್ಲಿ 2013ರಲ್ಲಿ ಜಲಪ್ರಳಯ ಆಗಿತ್ತು. ತೀರ್ಥ ಯಾತ್ರಿಗಳ ಸಹಿತ ಲಕ್ಷಾಂತರ ಮಂದಿ ಮಹಾ ಪ್ರಳಯದಲ್ಲಿ ಸಿಲುಕಿಕೊಂಡಿದ್ದರು. ಕೇರಳದ ಜಲಪ್ರಳಯಕ್ಕಿಂತ ಎಷ್ಟೋ ದೊಡ್ಡ ಮಟ್ಟದ ಮಹಾಹಾನಿ ಸಂಭವಿಸಿತ್ತು. ಹಾಗಿದ್ದರೆ ಗೋ ವನ್ನು ಪೂಜಿಸಿಯೂ ಇಲ್ಲೇಕೆ ಜಲ ಪ್ರಳಯ ಬಂತು? ಯಾಕೆ ಬಂತೆಂದರೆ ಮನುಷ್ಯನ ಭಾವನೆಗೂ ಜಲಪ್ರಳಯ ಗಳಿಗೂ ಯಾವುದೇ ಸಂಬಂಧವಿಲ್ಲ ಎಂದರ್ಥ. ಮುನುಷ್ಯನಿಗೆ ಭಾವನೆಯೊಂದಿಗೆ ಆಟಕ್ಕಿಳಿದು ಮೋಬ್ ಲಿಂಚಿಂಗ್ (ಗುಂಪು ಹತ್ಯೆ) ಸುಲಿಗೆ, ದರೋಡೆ ಎಲ್ಲ ಮಾಡಬಹುದಾದರೆ, ಪ್ರಕೃತಿಯೇಕೆ ಮುನಿಯಬಾರದು? ಮುನಿಯುತ್ತೆ ಎನ್ನುವುದಕ್ಕೆ ದೇಶದಲ್ಲಿ ಆಗಾಗ ಆಗುತ್ತಿರುವ ದುರಂತಗಳಲ್ಲಿ ಪಾಠ ಇದೆ.
ಇರಲಿ, 2004ರ ಸುನಾಮಿಯ ನಂತರ ಅತ್ಯಂತ ದೊಡ್ಡ ಪ್ರಕೃತಿ ವಿಕೋಪ ಉತ್ತರಖಂಡ್ನದ್ದು ಆಗಿದೆ. ಈ ಪ್ರಳಯ ದಲ್ಲಿ ಉತ್ತರಖಂಡ್, ಹಿಮಾಚಲ ಪ್ರದೇಶ, ದಿಲ್ಲಿ, ಉತ್ತರ ಪ್ರದೇಶ, ನೇಪಾಳಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಮಾನವ ಜೀವ ಹಾನಿಯಾಗಿದೆ. ಆ ಸಲ ಉತ್ತರಖಂಡದಲ್ಲಿ ಶೇ. 375ಕ್ಕಿಂತ ಹೆಚ್ಚು ಮಳೆಯಾಗಿತ್ತು. ಹೆಚ್ಚು ಮಳೆಯಿಂದಾಗಿ ಪ್ರಕೃತಿ ದುರಂತ ಬಾಯ್ದೆರೆದು ನಿಂತಿತು. ಇದಕ್ಕೂ ಬೀಫ್ ಮಾಂಸಕ್ಕೂ ಸಂಬಂಧವೇ ಇಲ್ಲ. ಬೀಫೇ ಪ್ರಕೃತಿ ವಿಕೋಪಗಳಿಗೆ ಕಾರಣವೆಂದಾದರೆ ಬೀಫ್ ರಫ್ತಿನಲ್ಲಿ ಭಾರತದೊಂದಿಗೆ ಪೈಪೋಟಿ ನಡೆಸುತ್ತಿರುವ ಬ್ರೆಝಿಲ್ ನೀರಿನಲ್ಲಿ ಕೊಚ್ಚಿ ಹೋಗಬೇಕಾಗಿತ್ತು. ಹಾಗೆ ಆಗಿಲ್ಲ. ಆಗುವುದೂ ಇಲ್ಲ. ಯಾಕೆಂದರೆ ಪ್ರಕೃತಿ ವಿಕೋಪಕ್ಕೂ ಬೀಫ್ಗೂ ಸಂಬಂಧವಿಲ್ಲ.
ಮಳೆಹಾನಿಯನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರಾಖಂಡದ ಅಂದಿನ ಮುಖ್ಯಮಂತ್ರಿ ವಿಜಯ ಬಹುಗುಣ ರಾಜೀನಾಮೆ ನೀಡಬೇಕಾಯಿತು. ಆಗ ಪ್ರಕೃತಿ ವಿಕೋಪಕ್ಕೆ ಅವರು ಐಎಂಡಿ ಅರ್ಥಾತ್ ಭಾರತ ಹವಮಾನ ಇಲಾ ಖೆಯ ವೈಫಲ್ಯವನ್ನು ಬೆಟ್ಟು ಮಾಡಿದ್ದರು. ವಿಜಯ್ ಬಹುಗುಣ ಈಗ ಬಿಜೆಪಿಯಲ್ಲಿದ್ದಾರೆ. ಹವಾಮಾನ ಇಲಾಖೆಗೆ ಸ್ವಲ್ಪ ಸರಿಯಾಗಿ ಮುನ್ಸೂಚನೆ ನೀಡುವ ತಾಕತ್ತಿರುತ್ತದೆ ಎಂದು ಬೇಕಾ ದರೂ ಹೇಳಬಹುದು. ಯಾಕೆಂದರೆ ಸೆಟಲೈಟ್ ಇತ್ಯಾದಿ ವೈಜ್ಞಾನಿಕ ವೀಕ್ಷಣೆ, ಪರಿವೀಕ್ಷಣೆಗಳಿಂದ ಮಳೆ ಬರುವ ಕುರಿತು ಮತ್ತು ಬರುವುದು ಬಿರುಗಾಳಿ ಮಳೆಯೋ ಚಂಡಮಾರುತವೋ ಎಂದು ಗುರುತಿಸಲು ಅದಕ್ಕೆ ಸಾಧ್ಯವಿದೆ. ಆದರೆ ಅದು ಸರಿಯಾದ ಹೊತ್ತಿಗೆ ತೇಲು ಗಣ್ಣು ಬಿಟ್ಟರೆ ಎಲ್ಲವೂ ಕೆಟ್ಟಿತು ಎಂದರ್ಥ. ಕೆಲವು ವಿತಂಡವಾದಿಗಳು, ಬೀಫ್, ನ್ಯಾಪ್ಕಿನ್ ಮುಂತಾದ ಕಾರಣ ಗಳಿಂದ ತಮ್ಮ ಸರಕಾರ ವೈಫಲ್ಯಗಳನ್ನು ಮುಚ್ಚಿ ಹಾಕುವ ಕೆಲಸಕ್ಕಿಳಿಯುತ್ತಿದ್ದಾರೆ.
ಕೇರಳಕ್ಕೆ 2017ರಲ್ಲಿ ಓಕಿ ಚಂಡ ಮಾರುತ ಬಡಿದಿತ್ತು. ಆಗ ಐಎಂಡಿ ಸರಿಯಾದ ಮುನ್ಸೂಚನೆ ನೀಡಲು ವಿಫಲವಾಗಿತ್ತು. 245 ಮೀನುಗಾರರು ಅಂದು ಸಮುದ್ರಪಾಲಾದರು. ಅರ್ಥಾತ್ ಚಂಡಮಾರುತಕ್ಕೆ ಬಲಿಯಾದರು. ಆಗ ಈಗಿನಂತೆ ಬೀಫ್ ಕಡಿದು ತಿನ್ನುವುದರಿಂದ ಹೀಗಾಯಿತು ಎಂದು ಯಾರೂ ಹೇಳಿರಲಿಲ್ಲ.
ಜನರ ಮೃತದೇಹದ ಮುಂದೆ ರಾಜಕೀಯ ನಡೆಸುವುದನ್ನು ತುಂಡು ರಾಜಕಾರಣಿಗಳು, ಪುಟಗೋಸಿ ಟಿವಿ ಗಳು ಬಿಟ್ಟು ಬಿಡಬೇಕು. ಅರ್ನಾಬ್ ಗೋಸ್ವಾಮಿಯಂತಹವರು ಯಾವುದೇ ಹಿಂಜರಿಕೆಯಿಲ್ಲದೆ ಒಂದು ರಾಜ್ಯದ ಜನತೆಯನ್ನು ನಾಚಿಕೆಗೇಡಿಗಳೆಂದು ತೀರ್ಪು ಮಾಡುವ ದುಷ್ಟತನ ಬೆಳೆಸಿ ಕೊಂಡಿದ್ದಾರೆ. ಅಂದರೆ ಇದೇ ದಾರಿ ಯಲ್ಲಿ ಬಹುತೇಕ ಹಲವಾರು ಮಾಧ್ಯಮಗಳು ಸಾಗುತ್ತಿವೆ ಅಥವಾ ಸಾಗಬೇಕಾದ ಅನಿವಾರ್ಯತೆಯನ್ನು ಸಂಘಪರಿವಾರಿಗಳು ಸೃಷ್ಟಿಸುತ್ತಿದ್ದಾರೆ. ಅರ್ನಾಬ್ ಏದುಸಿರು ಬಿಡುವಷ್ಟು ರಿಪಬ್ಲಿಕ್ ಟಿವಿ ವಿರುದ್ಧ ಕೇರಳೀಯರ ಟ್ರಾಲ್ಗಳು, ಪ್ರತಿಭಟನೆಗಳು ಸಾಮಾಜಿಕ ಮಾಧ್ಯಮ ದಲ್ಲಿ ಕಂಡು ಬಂದಿದೆ. ಜನರು ಎಚ್ಚೆತ್ತು ಕೊಳ್ಳಬೇಕು. ಮನುಷ್ಯರ ಬದುಕು ಸಂಕಷ್ಟದಲ್ಲಿ ನಲುಗುವಾಗ ಭಾವನಗಳೊಂದಿಗೆ ಚೆಲ್ಲಾಟವಾಡುವವರನ್ನು ತಿರಸ್ಕರಿಸಬೇಕಾಗಿದೆ. ಚಕ್ರಪಾಣಿ, ಯತ್ನಾಳ್ ಯಾರೇ ಇರಲಿ ಮನುಷ್ಯ ಧರ್ಮವನ್ನು ಪಾಲಿಸುವಂತಾಗಬೇಕಾಗಿದೆ.