ಸನ್ಮಾರ್ಗ ವಾರ್ತೆ
ಮುಂಬೈ,ಅ.3: ಹಾಥ್ರಸ್ ಘಟನೆಯಲ್ಲಿ ಯೋಗಿ ಆದಿತ್ಯನಾಥರ ಸರಕಾರವನ್ನು ಶಿವಸೇನೆ ಕಟುವಾಗಿ ಟೀಕಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸವಾದರೂ ಉತ್ತರ ಪ್ರದೇಶ ರಾಮರಾಜ್ಯವಾಗಿಲ್ಲ. ‘ಜಂಗಲ್ ರಾಜ್’ ಉತ್ತರ ಪ್ರದೇಶದಲ್ಲಿ ಈಗಲೂ ಇದೆ ಎಂದು ಶಿವಸೇನೆ ಹೇಳಿತು. ಮಹಿಳೆಯರ ವಿರುದ್ಧ ನಡೆಯುವ ದಾಳಿಗಳನ್ನು ಎದುರಿಸಲು ಉತ್ತರ ಪ್ರದೇಶ ಸರಕಾರ, ಕೇಂದ್ರ ಸರಕಾರ ವಿಫಲವಾಗಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯ ಆರೋಪಿಸಿದೆ.
ಮಹಿಳೆಯರ ವಿರುದ್ಧ ದಾಳಿಗಳು ಉತ್ತರ ಪ್ರದೇಶದಲ್ಲಿ ಪ್ರತೀದಿನ ಹೆಚ್ಚಳಗೊಳ್ಳುತ್ತಿದೆ ಎಂಬುದನ್ನು ಅತ್ಯಾಚಾರಕ್ಕೊಳಗಾದ ಹಾಥ್ರಸ್ ಬಾಲಕಿಯ ಅಂತಿಮ ಹೇಳಿಕೆ ಬಿಂಬಿಸುತ್ತಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶ ಸರಕಾರ ವಾದಿಸುತ್ತಿದೆ. ಹಥ್ರಾಸ್, ಬಲಾರಾಂಪುರದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಕೊಲೆಯಾಗಿದ್ದನ್ನು ಸಾಮ್ನಾ ಬೆಟ್ಟುಮಾಡಿದೆ.
ಮಹಾರಾಷ್ಟ್ರದ ಪಾಲ್‍ಘರ್‌ನಲ್ಲಿ ಇಬ್ಬರು ಸನ್ಯಾಸಿಗಳು ಜನರ ಗುಂಪು ಹಲ್ಲೆಯಿಂದ ಮೃತಪಟ್ಟಾಗ ಯೋಗಿ ಆದಿತ್ಯನಾಥ್, ಬಿಜೆಪಿಯ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ, ಈಗ ಅವರು ಯಾಕೆ ಮೌನದಲ್ಲಿದ್ದಾರೆ ಎಂದು ಶಿವಸೇನೆ ಪ್ರಶ್ನಿಸಿದೆ.












