ಹಾಥ್ರಸ್ ಸಂತ್ರಸ್ತೆಯ ಕುಟುಂಬವನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಆದೇಶ: ವಿವಾದದಲ್ಲಿ ಉತ್ತರ ಪ್ರದೇಶ ಸರಕಾರ

0
1040

ಸನ್ಮಾರ್ಗ ವಾರ್ತೆ

ಲಕ್ನೊ,ಅ.3: ಹಾಥ್ರಸ್‍ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿಯ ಕುಟುಂಬದವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಉತ್ತರ ಪ್ರದೇಶ ಸರಕಾರದ ಆದೇಶ ವಿವಾದವಾಗಿದೆ. ವಿಶೇಷ ತನಿಖಾ ತಂಡದ ಪ್ರಾಥಮಿಕ ತನಿಖಾ ವರದಿಯ ಆಧಾರದಲ್ಲಿ ಸುಳ್ಳು ಪರೀಕ್ಷೆ ನಡೆಸಲು ಸರಕಾರ ಆದೇಶ ಹೊರಡಿಸಿದೆ.

ಇದರಿಂದ ಹಲವೆಡೆಯಿಂದ ಪ್ರತಿಭಟನೆ ವ್ಯಕ್ತವಾಗಿದೆ. ದುರಂತ ಅನುಭವಿಸಿದ ಬಾಲಕಿಯ ಕುಟುಂಬವನ್ನು ಇನ್ನೂ ಪೀಡಿಸಬಾರದೆಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿತು. ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಾಳೆಂದು ಸುಳ್ಳು ಹೇಳಲಾಗಿದೆ ಎಂದು ಸರಕಾರ ಭಾವಿಸುತ್ತಿದೆಯೇ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶದಲ್ಲಿ ಪ್ರಶ್ನಿಸಿದ್ದಾರೆ.

ಬಾಲಕಿಯ ಕುಟುಂಬವನ್ನು ಪೊಲೀಸರು ಮತ್ತು ವಕೀಲರೊಂದಿಗೆ ಮಾತಾಡಲು ಪೊಲೀಸರು ನಿರ್ಬಂಧಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇದೇ ವೇಳೆ, ಸುಳ್ಳು ಪತ್ತೆ ಪರೀಕ್ಷೆ ವಿವಾದಕ್ಕೊಳಗಾಗಿದೆ. ಅಧಿಕಾರಿಗಳ ಅಮಾನತಿನಿಂದ ಹೋರಾಟ ಮುಗಿದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಇದೇ ವೇಳೆ, ಮುಖವುಳಿಸುವ ಕ್ರಮದೊಂದಿಗೆ ಉತ್ತರ ಸರಕಾರ ರಂಗಪ್ರವೇಶಿಸಿದೆ.

ಘಟನೆಯಲ್ಲಿ ಐವರು ಪೊಲೀಸರ ವಿರುದ್ಧ ಕ್ರಮ ಜರಗಿಸಲಾಗಿದ್ದು, ಸಿಬಿಐಗೆ ಪ್ರಕರಣವನ್ನೊಪ್ಪಿಸಲು ಸರಕಾರ ತೀರ್ಮಾನಿಸಿದೆಯೆಂಬ ಸೂಚನೆ ಲಭಿಸಿದೆ. ಪ್ರಕರಣದ ವಿವರವನ್ನು ಕೇಳಿ ಮಾನವ ಹಕ್ಕು ಆಯೋಗ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ನೋಟಿಸು ಕಳುಹಿಸಿದೆ.