ಬಂಜೆತನಕ್ಕೆ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿ ದಂಪತಿಗಳಿಗೆ ಮೋಸ: ವೈದ್ಯನೇ 17 ಮಕ್ಕಳ ತಂದೆ ಎಂದ ಡಿಎನ್‌ಎ ಫಲಿತಾಂಶ

0
934

ಸನ್ಮಾರ್ಗ ವಾರ್ತೆ

ಹೇಗ್,ಅ.7: ನೆದರ್‍ಲೆಂಡಿನ ಬಂಜೆತನಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಭಾರೀ ವಂಚನೆ ನಡೆದಿದ್ದು ಚಿಕಿತ್ಸೆಗೆ ಬಂದ ದಂಪತಿಗಳಿಗೆ ಆಸ್ಪತ್ರೆಯ ವೈದ್ಯರದ್ದೇ ವೀರ್ಯವನ್ನು ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅಜ್ಞಾತ ದಾನಿಯಿಂದ ವೀರ್ಯ ಸಿಗುತ್ತಿದೆ ಎಂದು ಭಾವಿಸಿ ಇವರೆಲ್ಲ ಕೃತ ಗರ್ಭಧಾರಣೆ ಮಾಡಿಸಿಕೊಂಡಿದ್ದರು. ಆದರೆ ಈ ರೀತಿ ವೀರ್ಯ ದಾನದಿಂದ ಗೈನಾಲಜಿಸ್ಟ್‌ಗೆ ಹದಿನೇಳು ಮಕ್ಕಳು ಹುಟ್ಟಿವೆ ಎಂದು ಡಚ್ ಆಸ್ಪತ್ರೆ ತಿಳಿಸಿದೆ.

ಪೂರ್ವ ಡಚ್ ನಗರವಾದ ಸ್ವಾಲ್ಲದ ಇಸಾಲ ಬಂಜೆಯರ ಶುಶ್ರೂಷೆ ಆಸ್ಪತ್ರೆಯಲ್ಲಿ ಈ ವಂಚನೆಯು ನಡೆದಿದೆ. 1981ರಿಂದ 1993ರವರೆಗೆ ಇಲ್ಲಿ ಕೆಲಸದಲ್ಲಿದ್ದ ಜಾನ್ ವೈಲ್ಡ್‌ಶಟ್ ಎಂಬ ವೈದ್ಯ ಈ ಮೋಸದ ಹಿಂದಿದ್ದಾರೆ. ಆದರೆ ಈ ವೈದ್ಯರು ಈಗ ಬದುಕಿಲ್ಲ. 2009ರಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕಾನೂನು ಬದ್ಧ ಮಕ್ಕಳ ಹೊರತಾಗಿ ಮಾಜಿ ಗೈನಾಲಜಿಸ್ಟ್‌ಗೆ ಒಟ್ಟು ಹದಿನೇಳು ಮಕ್ಕಳಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಡಾ. ವೈಲ್ಡ್‌‌ಶಟ್‍ರ ಕಾರ್ಯವನ್ನು ನೈತಿಕವಾಗಿ ಒಪ್ಪಲು ಸಾಧ್ಯವಿಲ್ಲ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಇವರು ಮತ್ತಷ್ಟು ಮಂದಿಗೆ ವೀರ್ಯದಾನ ಮಾಡಿರಬಹುದೇ ಎಂದು ಡಚ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಒಬ್ಬರು ಡಿಎನ್‍ಎ ಮ್ಯಾಪಿಂಗ್ ಮಾಡಿದಾಗ ಈ ಮೋಸ ಬಹಿರಂಗವಾಗಿದೆ. ಮ್ಯಾಪಿಂಗಿನಲ್ಲಿ ವೈದ್ಯರ ಸೊಸೆಯೊಂದಿಗೆ ಡಿಎನ್‍ಎ ಹೊಂದಾಣಿಕೆಯಾಗಿದೆ. ನಂತರ ನಡೆದ ತನಿಖೆಯಲ್ಲಿ ತನ್ನ ತಾಯಿಗೆ ವೀರ್ಯವನ್ನು ವೈದ್ಯ ವೈಲ್ಡ್‌ಶಟ್ ನೀಡಿದ್ದು ಗೊತ್ತಾಗಿತ್ತು. ಡಚ್ ಕಾನೂನಿನ ಪ್ರಕಾರ ಹದಿನಾರು ವರ್ಷದಿಂದ ಇಂತಹ ಮಕ್ಕಳಿಗೆ ತಮ್ಮ ದಾನಿಯ ಐಡೆಂಟಿಟಿ ಗುರುತಿಸುವ ಹಕ್ಕಿದೆ.

ಘಟನೆಯಲ್ಲಿ ಡಚ್ ಹೆಲ್ತ್ ಆಂಡ್ ಯೂತ್ ಇನ್ಸ್‌ಪೆಕ್ಟರ್ ತನಿಖೆಗೆ ಒಪ್ಪಿಕೊಂಡಿಲ್ಲ. ಫರ್ಟಿಲಿಟಿ ಚಿಕಿತ್ಸೆ ಕುರಿತು ಕಾನೂನು ನಿಯಮಗಳು ಇಲ್ಲದ ಸಮಯದಲ್ಲಿ ಘಟನೆ ಆಗಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. 2004ರಲ್ಲಿ ಜಾರಿಗೊಂಡ ಕಾನೂನು ಪ್ರಕಾರ ಒಬ್ಬ 25 ಮಂದಿಗೆ ವೀರ್ಯದಾನ ಮಾಡಬಹುದು. ಇದಕ್ಕೂ ಮುಂಚೆ ನೆದರ್ಲೆಂಡಿನಲ್ಲಿ ಇಂತಹ ವಿವಾದ ನಡೆದಿದೆ. ರೋಟರ್‍ಡ್ಯಾಮ್‍ನ ಬಂಜೆಯರ ಚಿಕಿತ್ಸೆ ಕ್ಲಿನಿಕ್‍ನಲ್ಲಿ ಡಚ್ ವೈದ್ಯನಿಗೆ 49 ಮಕ್ಕಳು ಹುಟ್ಟಿದ್ದು ಕಳೆದ ವರ್ಷ ಬಹಿರಂಗವಾಗಿದೆ.