ಸನ್ಮಾರ್ಗ ವಾರ್ತೆ
ಋಷಿಕೇಶ(ಉತ್ತರಾಖಂಡ)ಅ.9: ಯೋಗ ಕಲಿಕೆಯ ಆಸಕ್ತಿಯಿಟ್ಟುಕೊಂಡಿದ್ದ 37 ವರ್ಷದ ಅಮೆರಿಕದ ಮಹಿಳೆಯ ಮೇಲೆ ಋಷಿಕೇಶದಲ್ಲಿ ಹಲವು ಸಲ ಅತ್ಯಾಚಾರವ್ಯಸಗಲಾದ ಕುರಿತು ದೂರು ದಾಖಲಾಗಿದೆ.
ಅಕ್ಟೋಬರ್ 5ರಂದು ಸ್ಥಳೀಯ ನಿವಾಸಿ ಅಭಿನವ್ ರಾಯ್ ಎಂಬಾತ ಫ್ಲಾಟಿನಲ್ಲಿ ಅತ್ಯಾಚಾರ ಮಾಡಿದನೆಂದು ಮುನಿಕಿರತಿ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದರು.
ಯೋಗ ಮತ್ತು ಮಾದಕದ್ರವ್ಯದೊಂದಿಗಿನ ಪ್ರೀತಿಯಿಂದ ದೂರುದಾರೆ ಮತ್ತು ರಾಯ್ ಪರಸ್ಪರ ಹಿಂದಿನಿಂದಲೇ ಪರಿಚಿತರಾಗಿದ್ದರು. ದೂರು ಹಿಂಪಡೆಯುವುದಕ್ಕಾಗಿ ಆರೋಪಿಯ ತಂದೆ ತನಗೆ ಒತ್ತಾಯ ಮಾಡುತ್ತಿದ್ದಾರೆಂದು ವಿದೇಶಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.












