ಹೆಣ್ಣು ಮಗುವಿಗೆ ಇಂಟರ್ನೆಟ್ ಕಂಪೆನಿ ಹೆಸರು; 18 ವರ್ಷ ಉಚಿತ ವೈಫೈ ಗಳಿಸಿದ ಸ್ವಿಸ್ ದಂಪತಿ

0
570

ಸನ್ಮಾರ್ಗ ವಾರ್ತೆ

ಬೆರ್‍ನ್,ಅ.19: ದಂಪತಿಗಳು ತಮ್ಮ ಪುತ್ರಿಗೆ ಇಂಟರ್ನೆಟ್ ಕಂಪೆನಿಯ ಹೆಸರಿಸಿದ್ದಕ್ಕಾಗಿ ಹದಿನೆಂಟು ವರ್ಷಗಳ ಉಚಿತ ವೈಫೈಯನ್ನು ಸ್ವಿಟ್ಝರ್‍ಲೆಂಡಿನ ಇಂಟರ್ನೆಟ್ ಕಂಪೆನಿ ಟ್ವಿಫಿ ನೀಡಿದೆ.

ಗಂಡು ಮಕ್ಕಳಿಗೆ ಟ್ವಿಫುಸ್ ಮತ್ತು ಹೆಣ್ಣು ಮಕ್ಕಳಿಗೆ ಟ್ವಿಫಿಯ ಎಂದು ಹೆಸರಿಸಬೇಕೆಂದು ಹೇಳಲಾಗಿತ್ತು. ಮಗುವಿನ ಜನನ ಸರ್ಟಿಫಿಕೆಟ್ ಪರಿಶೀಲಿಸಿದ ಬಳಿಕ ಕಂಪೆನಿ ಉಚಿತ ವೈಫೈ ನೀಡಲಿದೆ ಎಂಬುದಾಗಿ ಸೂಚಿಸಿತ್ತು. ಟ್ವಿಫಿಯ ಎಂದು ತಮ್ಮ ಮಗುವಿಗೆ ಹೆಸರಿಸಿದ ದಂಪತಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ. ಹೆಣ್ಣು ಮಗುವಿನ ಮಧ್ಯದ ಹೆಸರನ್ನು ಟ್ವಿಫಿಯ ಎಂದು ಇರಿಸಿ ದಂಪತಿ ಉಚಿತ ವೈಫೈ ಕೊಡುಗೆ ಪಡೆದುಕೊಂಡಿದ್ದಾರೆ.

ಮನೆಯಲ್ಲಿ ಇಂಟರ್‌ನೆಟ್‌ಗೆ ನೀಡುತ್ತಿದ್ದ ಹಣವನ್ನು ಇನ್ನು ಮುಂದೆ ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿಡುತ್ತೇವೆ ಎಂದು ತಂದೆ ಹೇಳಿದರು. ದೊಡ್ಡವಳಾದಾಗ ಅವಳಿಗೆ ಆ ಹಣದಿಂದ ಒಂದು ಕಾರು ತೆಗೆದು ಕೊಡುವುದಾಗಿ ಅವರು ಹೇಳಿದ್ದಾರೆ. ಕಂಪೆನಿಯ ಸೂಚನೆಯಿಂದ ಕಂಪೆನಿ ಹೆಸರಿಟ್ಟದ್ದರಿಂದ ಸ್ವಲ್ಪಮಟ್ಟಿನ ಲಜ್ಜೆಯಿದೆ ಆದ್ದರಿಂದ ತಮ್ಮ ಹೆಸರು ವಿವರವನ್ನು ಬಹಿರಂಗಪಡಿಸಿಲ್ಲ ಎಂದು ದಂಪತಿಗಳು ಹೇಳಿದರು.