ಮಧ್ಯಪ್ರದೇಶ| ಬಂಧಿತ ಯುವತಿಯ ಮೇಲೆ ಪೊಲೀಸರಿಂದ ಸಾಮೂಹಿಕ ಅತ್ಯಾಚಾರ: ಆರೋಪ

0
771

ಸನ್ಮಾರ್ಗ ವಾರ್ತೆ

ಭೋಪಾಲ,ಅ.19: ಮಧ್ಯಪ್ರದೇಶದ ರೇವ ಜಿಲ್ಲೆಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಯುವತಿಯಯನ್ನು ಠಾಣೆಯ ಪೊಲೀಸರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇಪ್ಪತ್ತು ವರ್ಷದ ಯುವತಿಯನ್ನು ಐವರು ಪೊಲೀಸರು ಹತ್ತು ದಿವಸಗಳ ಕಾಲ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಮೇ ತಿಂಗಳಲ್ಲಿ ರೇವಾದ ಮಂಗವಾನಿಯ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತನ್ನನ್ನು ಐವರು ಪೊಲೀಸರು ಹತ್ತು ದಿವಸ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಜಿಲ್ಲಾ ಜಡ್ಜ್‌ನ್ನೊಳಗೊಂಡ ಕಾನೂನು ತಜ್ಞರ ತಂಡಕ್ಕೆ ಹೇಳಿಕೆ ನೀಡಿದ್ದಾಳೆ.

ಕೊಲೆ ಪ್ರಕರಣದಲ್ಲಿ ಬಂಧಿಸಲಾದ ಯುವತಿ ಜೈಲಿನಲ್ಲಿದ್ದಳು. ಅಕ್ಟೋಬರ್ ಹತ್ತರಂದು ಜೈಲಿನಲ್ಲಿ ಪರಿಶೀಲನೆಗೆ ಬಂದ ಅಡಿಶನಲ್ ಜಿಲ್ಲಾ ಜಡ್ಜ್ ಮತ್ತು ವಕೀಲರ ತಂಡಕ್ಕೆ ಯುವತಿ ದೂರು ನೀಡಿದ್ದಾಳೆ. ಕಸ್ಟಡಿಗೆ ಪಡೆದುಕೊಂಡ ಬಳಿಕ ಬಂಧಿಸದೆ ಲಾಕಪ್‍ನಲ್ಲಿ ಹಾಕಿ ನಿರಂತರ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮೇ 9 ಮತ್ತು 21ರೊಳಗೆ ಅತ್ಯಾಚಾರ ನಡೆಯಿತು ಎಂದು ಅಡಿಶನಲ್ ಜಿಲ್ಲಾ ಜಡ್ಜ್ ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ. ನಂತರ ಘಟನೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಲಾಗಿದೆ. ಮಹಿಳಾ ಕಾನ್ಸ್‌ಟೇಬಲ್ ಎಂದು ಹೇಳಿ ಅತ್ಯಾಚಾರ ತಡೆಯಲು ಯತ್ನಿಸಿದರೂ ಪೊಲೀಸರು ಹೊಡೆದಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ಮೂರು ತಿಂಗಳ ಮುಂದೆ ತನ್ನ ಅತ್ಯಾಚಾರ ನಡೆದಿರುವುದನ್ನು ಜೈಲ್ ವಾರ್ಡನ್‍ರಿಗೆ ತಿಳಿಸಿದ್ದೆ. ಆದರೂ ಯಾವುದೇ ರೀತಿ ಕ್ರಮ ನಡೆಯಲಿಲ್ಲ ಎಂದು ಯುವತಿ ಜೈಲಿಗೆ ಭೇಟಿ ನೀಡಿದ ಕಾನೂನು ತಜ್ಞರ ತಂಡಕ್ಕೆ ತಿಳಿಸಿದ್ದಾಳೆ. ಅತ್ಯಾಚಾರದ ಕುರಿತು ತನ್ನೊಂದಿಗೆ ಹೇಳಿದ್ದಾಳೆ ಎಂದು ವಾರ್ಡನ್ ಒಪ್ಪಿಕೊಂಡಿದ್ದಾರೆ ಎಂದು ಕಾನೂನು ತಜ್ಞರ ತಂಡದ ವಕೀಲರು ತಿಳಿಸಿದರು.