ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.19: ಪಂಜಾಬ್, ಉತ್ತರ ಪ್ರದೇಶ, ಸಿಕ್ಕಿಂನಲ್ಲಿ ಕೊರೋನ ವ್ಯಾಪನದಿಂದ ಮುಚ್ಚಲಾಗಿದ್ದ ಶಾಲೆಗಳಲ್ಲಿ ಕೆಲವು ತರಗತಿಗಳನ್ನು ಪುನರಾರಂಭಿಸಲಾಗಿದೆ. ಏಳು ತಿಂಗಳವರೆಗೆ ಮುಚ್ಚಿದ್ದ ಶಾಳೆಗಳನ್ನು ಈ ರಾಜ್ಯಗಳಲ್ಲಿ ತೆರೆಯಲಾಗಿದೆ. ಶಾಲೆಯ ತರಗತಿಗಳ ಜೊತೆಗೆ ಆನ್ಲೈನ್ ಕ್ಲಾಸುಗಳು ಮುಂದುವರಿಯಲಿದೆ. ವಿದ್ಯಾರ್ಥಿಗಳಲ್ಲಿ ಯಾರನ್ನೂ ಶಾಲೆಗೆ ಬರಲು ಒತ್ತಾಯಿಸಿಲ್ಲ.
ಪಂಜಾಬ್, ಉತ್ತರ ಪ್ರದೇಶದಲ್ಲಿ 9ರಿಂದ 12ರವರೆಗಿನ ತರಗತಿಗಳ ವಿದ್ಯಾರ್ಥಿಗಳು ಮತ್ತು ಹೆತ್ತವರ ಒಪ್ಪಿಗೆ ಪಡೆದು ಬರಬೇಕಾಗಿದೆ. ಶಿಫ್ಟ್ಗಳಲ್ಲಿ ಕ್ಲಾಸು ನಡೆಯಲಿದೆ. ಸಾಮಾಜಿಕ ಅಂತರ, ಪರಿಸರ ಶುಚಿತ್ವ ಸಹಿತ ಅಗತ್ಯವಾದ ಎಲ್ಲ ನಿಬಂಧನೆಗಳನ್ನು ಶಾಲೆಗಳು ಅನುಸರಿಸಬೇಕಾಗಿದೆ. ಸಿಕ್ಕಿಂನ ರಾಜ್ಯ ಸರಕಾರ ಹೊಸ ಅಕಾಡಮಿಕ್ ಕ್ಯಾಲಂಡರ್ ರೂಪಿಸಿದೆ. ಆ ಪ್ರಕಾರ 11, 12 ತರಗತಿಯ ವಿದ್ಯಾರ್ಥಿಗಳಿಗೆ ಅಕ್ಟೋಬರ್ 19 ರಿಂದ ಶಾಲೆಗೆ ಬರಬಹುದು. ಪೋಷಕರ ಬರಹದ ಮೂಲಕ ಅನುಮತಿ ಬೇಕು. ಶಾಲೆಗೆ ಬರುವ ಮಾಸ್ಕ್ ಕೈಗವಸು ಧರಿಸಬೇಕು. ಉದ್ದತೋಳಿನ ಅಂಗಿ ಧರಿಸಬೇಕು ಎಂಬ ಸೂಚನೆ ನೀಡಲಾಗಿದೆ.












