ಸನ್ಮಾರ್ಗ ವಾರ್ತೆ
ಮುಂಬೈ,ಅ.22: ರಾಜ್ಯದ ಪ್ರಕರಣಗಳನ್ನು ವಹಿಸಿಕೊಂಡು ಸಿಬಿಐಗೆ ತನಿಖೆ ಮಾಡಲು ನೀಡಿದ ಅನುಮತಿಯನ್ನು ಮಹಾರಾಷ್ಟ್ರ ಸರಕಾರ ಹಿಂಪಡೆದಿದೆ. ಇನ್ನು ಮುಂದೆ ಪ್ರಕರಣಗಳ ತನಿಖೆಗೆ ಸಿಬಿಐ ಮಹಾರಾಷ್ಟ್ರ ಸರಕಾರದ ಅನುಮತಿಯನ್ನು ಪಡೆದಿರಬೇಕೆಂದು ಸರಕಾರ ತಿಳಿಸಿದೆ.
ರಿಪಬ್ಲಿಕ್ ಟಿವಿಯ ಟಿಆರ್ಪಿ ವಂಚನೆ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ರಿಪಬ್ಲಿಕ್ ಟಿವಿ ಸಹಿತ ಮೂರು ಚ್ಯಾನೆಲ್ಗಳ ಟಿಆರ್ಪಿ ಮೋಸವನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದೇ ರೀತಿಯ ಉತ್ತರ ಪ್ರದೇಶ ಪೊಲೀಸರು ಕೇಸು ದಾಖಲಿಸಿದ್ದು ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುವ ಕೇಸುಗಳನ್ನು ಸಿಬಿಐ ವಹಿಸಿಕೊಳ್ಳಲಿದೆ ಎಂಬ ವದಂತಿ ಹರಡಿತ್ತು. ಈ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಕರಣಗಳನ್ನು ಸಿಬಿಐ ತನಿಖೆಗೆ ಸರಕಾರದ ಅನುಮತಿ ಬೇಕೆಂಬ ನಿಬಂಧನೆಯನ್ನು ಇರಿಸಲಾಗಿದೆ. ಕೇಂದ್ರದೊಂದಿಗಿನ ಮುನಿಸು ಇದಕ್ಕೆ ಕಾರಣವೆನ್ನಲಾಗುತ್ತಿದೆ.
ರಿಪಬ್ಲಿಕ್ ಟಿವಿ ಸಹಿತ ಟಿಆರ್ಪಿ ವಂಚನೆ ಪ್ರಕರಣದಲ್ಲಿ ತನಿಖೆ ಇಲ್ಲದಂತೆ ಮಾಡುವ ಪ್ರಯತ್ನ ಸಿಬಿಐ ತನಿಖೆಯ ಹಿಂದಿದೆ ಎಂದು ಆಡಳಿತ ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಇದೇವೇಳೆ ಸುಶಾಂತ್ ಸಿಂಗ್ ರಾಜಪೂತರ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಹೊಸ ತೀರ್ಮಾನದಿಂದ ಅಡಚಣೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು. ಸುಪ್ರೀಂ ಕೋರ್ಟಿನ ಅನುಮತಿಯಿರುವುದರಿಂದ ತನಿಖೆಗೆ ರಾಜ್ಯ ಸರಕಾರದ ಅನುಮತಿ ಅಗತ್ಯವಿಲ್ಲ. ಟಿವಿ ನೋಡುಗರ ಸಂಖ್ಯೆಯನ್ನು ಲೆಕ್ಕ ಮಾಡುವ ರೇಟಿಂಗ್ ವ್ಯವಸ್ಥೆಯಲ್ಲಿ ವಂಚನೆ ನಡೆದಿದೆ ಎನ್ನುವುದನ್ನು ಪತ್ತೆಹಚ್ಚಿ ಮುಂಬೈ ಪೊಲೀಸರು ಮೂರು ಚ್ಯಾನೆಲ್ಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಎರಡು ಮರಾಠಿ ಚ್ಯಾನೆಲ್ಗಳ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












