ಕೊರೋನ ಮದ್ದಿನ ಲಾಭ ಪತಂಜಲಿಗೆ; 241 ಕೋ.ರೂ. ಮಾರಾಟ

0
398

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಅ. 27: ಏಳು ದಿವಸಗಳಲ್ಲಿ ಕೊರೋನ ಗುಣಮುಖವಾಗುವ ಸಿದ್ಧೌಷಧ ಎಂಬ ಪತಂಜಲಿ ನೀಡಿದ ಔಷಧ ಜಾಹೀರಾತು ಕೋಟ್ಯಂತರ ರೂಪಾಯಿಗೆ ಮಾರಾಟವಾಗಿದೆ. ಜೂನ್ 23ಕ್ಕೆ ಹೊರಬಂದ ಮದ್ದು ನಾಲ್ಕು ತಿಂಗಳಲ್ಲಿ 241 ಕೋಟಿ ರೂ. ಮಾರುಕಟ್ಟೆ ಮಾಡಿದೆ. ಕೊರೋನ ಎಂಬ ಆಯುರ್ವೇದ ಮದ್ದಿನ 85 ಲಕ್ಷ ಪ್ಯಾಕೆಟ್‍ಗಳು ಇಡೀ ದೇಶದಲ್ಲಿ ಮಾರಾಟವಾಗಿವೆ ಎಂದು ಕಂಪೆನಿಯ ಅಧಿಕೃತ ಲೆಕ್ಕಗಳು ತಿಳಿಸಿವೆ. ಮದ್ದಿನಿಂದ ಮನುಷ್ಯನ ದೇಹದಲ್ಲಿ ಏನಾದರೂ ಪ್ರಯೋಜನ ಆಗುತ್ತದೆಯೇ, ಯಾವುದೇ ರೋಗ ಗುಣಮುಖವಾಗುತ್ತದೆಯೇ ಎಂದು ಸಾಬೀತುಗೊಳ್ಳದ್ದು ವಸ್ತು ಸ್ಥಿತಿಯಾಗಿದೆ. ಸರಿಯಾದ ಕ್ಲಿನಿಕಲ್ ಟ್ರಯಲ್ ಡಾಟದ ಅಭಾವದಿಂದ ಕೆಮ್ಮು, ಜ್ವರಕ್ಕೆ ಮದ್ದು ಇದೆಂದು ಪ್ರಚಾರ ಮಾಡಲಾಗಿತ್ತು. ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲಾಗುವುದು ಎನ್ನಲಾಗಿತ್ತು. ಮದ್ದು ಹೊರಬಂದ ಸಮಯದಲ್ಲಿ ಕೊರೊನೊ ರೋಗ ಶಾಂತಿ ಉತ್ಪನ್ನ ಎಂಬ ಜಾಹೀರಾತು ನೀಡುವುದನ್ನು ನಿಲ್ಲಿಸಲು ಆಯುಷ್ ಸಚಿವಾಲಯ ಪತಂಜಲಿಗೆ ಆದೇಶಿಸಿತ್ತು. ಆಗ ಮದ್ದನ್ನು ಕೆಮ್ಮು, ಜ್ವರ, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನವೆಂದು ಕಂಪೆನಿ ಹೇಳಿತು.

ಈಗ ಇದು ಕೊರೊನ ಇಮ್ಯುನಿಟಿ ಬೂಸ್ಟರ್ ಆಗಿ ದೇಶದಲ್ಲಿ ಮಾರಾಟವಾಗುತ್ತಿದೆ. ಹರಿದ್ವಾರದ ಪತಂಜಲಿ ರಿಸರ್ಚ್ ಇನ್ಸಿಟಿಟ್ಯೂಟ್ ಮದ್ದು ಅಭಿವೃದ್ಧಿ ಪಡಿಸಿತ್ತು. 30 ದಿವಸದ ಕಿಟ್‍ಗೆ 545 ರೂಪಾಯಿ ದರ. ದಿವ್ಯ ಕೊರೊನ ಕಿಟ್ ಉಪಯೋಗಿಸಿ ಮೂರರಿಂದ ಏಳು ದಿವಸಗಳಲ್ಲಿ ಕೊರೊನದಿಂದ ಮುಕ್ತರಾಗಬಹುದೆಂದು ಬಾಬಾ ರಾಮದೇವ್ ಹೇಳಿದ್ದರು.

ಅಕ್ಟೋಬರ್ 18 ಮತ್ತು ಜೂನ್ 23ರ ನಡುವೆ ಪತಂಜಲಿ 23.54 ಲಕ್ಷ ಕೊರೊನ ಕಿಟ್‍ಗಳನ್ನು ಮಾರಿದೆ ಎಂದು ಕಂಪೆನಿಯ ಅಧಿಕೃತ ಲೆಕ್ಕಗಳು ತಿಳಿಸುತ್ತಿವೆ.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.