ಡೊನಾಲ್ಡ್ ಟ್ರಂಪ್‍ರ ಚುನಾವಣಾ ಪ್ರಚಾರ ವೆಬ್‍ಸೈಟ್ ಹ್ಯಾಕ್

0
425

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಅ. 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಚುನಾವಣಾ ಪ್ರಚಾರದ ವೆಬ್‍ಸೈಟ್ ಮಂಗಳವಾರ ಮೂವತ್ತು ನಿಮಿಷ ಹ್ಯಾಕ್ ಆಗಿತ್ತೆಂದು ಅಮೆರಿಕದಿಂದ ವರದಿಯಾಗಿದೆ. ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರಲು ಹೊರ ದೇಶಗಳಿಂದ ಹಸ್ತಕ್ಷೇಪ ನಡೆಯಬಹುದೆಂದು ವರದಿಗಳಿದ್ದವು. ಈ ಹಿನ್ನೆಲೆಯಲ್ಲಿ ತೀರ ಎಚ್ಚರಿಕೆಯಿಂದ ಅಮೆರಿಕದ ತನಿಖಾ ಏಜೆನ್ಸಿಗಳು ಕಾರ್ಯ ಪ್ರವೃತ್ತವಾಗಿವೆ. ಹಾಗಿದ್ದರೂ ಟ್ರಂಪ್‍ರ ವೆಬ್‍ಸೈಟ್ ಹ್ಯಾಕ್ ಮಾಡುವಲ್ಲಿ ಹ್ಯಾಕರ್‍ ಗಳು ಯಶಸ್ಸು ಪಡೆದಿದ್ದಾರೆ.

ವೆಬ್‍ಸೈಟ್ ಹ್ಯಾಕ್ ಮಾಡಿ ಕ್ರಿಪ್ಟೊ ಕರೆನ್ಸಿಯ ಜಾಹೀರಾತುಗಳನ್ನು ಹ್ಯಾಕರ್ ಗಳು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಟ್ರಂಪ್‍ರ ಸಂಬಂಧಿಕರ ರಹಸ್ಯ ಮಾತುಗಳ ಕುರಿತ ವಿವರಗಳೂ ನಮ್ಮಲ್ಲಿದೆ ಎಂದು ಹ್ಯಾಕರ್‍ ಗಳು ಹೇಳಿಕೊಂಡಿದ್ದಾರೆ. ವೆಬ್‍ಸೈಟ್ ಹ್ಯಾಕ್ ಆಗಿರುವ ವಿವರಗಳನ್ನು ಟ್ರಂಪ್‍ರ ವಕ್ತಾರ ದೃಢಪಡಿಸಿದ್ದಾರೆ. ಪೊಲೀಸರು ಹ್ಯಾಕಿಂಗ್‍ನ ಮೂಲವನ್ನು ಪತ್ತೆಹಚ್ಚಲಿದ್ದಾರೆ. ಮುಖ್ಯ ಡಾಟ ನಷ್ಟವಾಗಿಲ್ಲ ಎಂದು ಅವರು ಹೇಳಿದರು. ಆದರೆ ಅಮೆರಿಕ ಗುಪ್ತಚರ ಏಜೆನ್ಸಿ ಎಫ್‍ಭಿಐ ಹ್ಯಾಕಿಂಗ್ ಕುರಿತು ಈವರೆಗೆ ಬಹಿರಂಗ ಹೇಳಿಕೆ ನೀಡಿಲ್ಲ.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.