ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಅ. 27: ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ಸಿಪಿಎಂನೊಂದಿಗೆ ಸಖ್ಯ ಮಾಡಿಕೊಳ್ಳುವುದರ ವಿರುದ್ಧ ಕೇರಳ ಸಿಪಿಎಂನಲ್ಲಿ ಅಪಸ್ವರ ಕೊನೆಗೊಂಡಿದೆ. ಕಳೆದ ದಿವಸ ಪೊಲಿಟ್ಬ್ಯೂರೊ ಸಭೆಯಲ್ಲಿ ಹಿಂದಿನ ನಿಲುವಿನಲ್ಲಿ ಕೇರಳದ ನಾಯಕರು ಬದಲಾವಣೆ ಮಾಡಿಕೊಂಡು ವಿರೋಧವನ್ನು ಹಿಂತೆಗೆದುಕೊಂಡಿದ್ದಾರೆ. ಈ ತಿಂಗಳು ನಡೆಯಲಿರುವ ಕೇಂದ್ರ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಸಖ್ಯದ ಕುರಿತು ಚರ್ಚೆ ನಡೆಯಲಿದೆ.
2016ರ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಸೇರಿ ಸ್ಪರ್ಧಿಸುವ ಪಶ್ಚಿಮ ಬಂಗಾಳ ಘಟಕದ ನಿಲುವನ್ನು ಕೇರಳ ಘಟಕ ಬಲವಾಗಿ ವಿರೋಧಿಸಿತ್ತು. ನಂತರ ಆ ಸಮಯದಲ್ಲಿ ಕಾಂಗ್ರೆಸ್ನೊಂದಿಗೆ ಸಖ್ಯ ಸಾಧ್ಯವಾಗಿರಲಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಮುಂದಿನ ಉಪಚುನಾವಣೆಗಳಲ್ಲಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ನೊಂದಿಗೆ ಸಖ್ಯ ಮಾಡಿಕೊಳ್ಳುವ ಅಗತ್ಯವು ಪೊಲಿಟ್ ಬ್ಯೂರೊ ಸಭೆಯಲ್ಲಿ ಎದ್ದು ಬಂದಿತ್ತು. ಇದಕ್ಕೆ ಪೂರಕವಾಗಿ ಎಲ್ಲರೂ ಪ್ರತಿಕ್ರಿಯಿಸಿದರು.
ಹೀಂದಿನ ವಿರೋಧ ಕೇರಳ ಘಟಕದಿಂದಾಗಿದ್ದರೆ ಈ ಸಲ ತನ್ನ ಹಿಂದಿನ ನಿಲುವಿನಿಂದ ಅದು ಹಿಂದೆ ಸರಿಯಿತು. ಬೇರೆ ದಾರಿಯಿಲ್ಲದ್ದರಿಂದ ಕಾಂಗ್ರೆಸ್ಸಿನೊಂದಿಗೆ ಸಖ್ಯ ಮಾಡಿಕೊಳ್ಳಬಹುದೆಂದು ಪೊಲಿಟ್ಬ್ಯೂರೊದಲ್ಲಿ ನಿರ್ಣಯಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.












