ಆಕ್ಸಫರ್ಡ್ ವ್ಯಾಕ್ಸಿನ್ ನವೆಂಬರಿನಲ್ಲಿ: ಒಂದೇ ಡೋಸ್ ವರ್ಷವಿಡೀ ಪ್ರತಿರೋಧ

0
434

ಸನ್ಮಾರ್ಗ ವಾರ್ತೆ

ಲಂಡನ್, ಅ. 27: ಆಕ್ಸಫರ್ಡ್ ವಿಶ್ವವಿದ್ಯಾನಿಲಯ ಮತ್ತು ಬ್ರಿಟಿಷ್ ಮದ್ದು ಉತ್ಪಾದಕರಾದ ಆಸ್ಟ್ರೊ ಸೆನಕ ಸೇರಿ ತಯಾರಿಸಿದ ಕೊರೊನ ವ್ಯಾಕ್ಸಿನ್ ಪಡೆಯಲು ಲಂಡನಿನ ಪ್ರಧಾನ ಆಸ್ಪತ್ರೆಗಳಿಗೆ ನಿರ್ದೇಶನ ಸಿಕ್ಕಿದೆ ಎಂದು ವರದಿಯಾಗಿದೆ. ನವೆಂಬರ್ ಮೊದಲ ವಾರದಲ್ಲಿ ಪ್ರಥಮ ಬ್ಯಾಚ್ ವ್ಯಾಕ್ಸಿನ್ ಬರಲಿದೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸನ್ ಪತ್ರಿಕೆ ವರದಿಮಾಡಿದೆ.

ನಿಬಂಧನೆ ಪೂರ್ಣಗೊಂಡು ಅನುಮತಿ ಪಡೆಯುತ್ತಿರುವ ಮೊದಲ ಕೊರೊನ ವ್ಯಾಕ್ಸಿನ್ ಆಸ್ಟ್ರೊಸೆನಕ ಕಂಪೆನಿಯದು ಎನ್ನಲಾಗುತ್ತಿದ್ದು ವ್ಯಾಕ್ಸಿನ್ ಪರೀಕ್ಷೆ, ತಯಾರಿಕೆಗೆ ಆಸ್ಟ್ರೊ ಕಂಪೆನಿಗೆ ಲೈಸನ್ಸ್ ಲಭಿಸಿದ್ದು ಎಪ್ರಿಲ್‍ನಲ್ಲಿ ಆಕ್ಸ್ ಫರ್ಡ್ ಯುನಿವರ್ಸಿಟಿ ವಿಜ್ಞಾನಿಗಳು ವ್ಯಾಕ್ಸಿನ್ ಅಭಿವೃದ್ಧಿ ಕಾರ್ಯಕ್ಕಿಳಿದಿದ್ದರು.

ನಿರ್ಮಾಣ-ವಿತರಣೆಗೆ ಸಂಬಂಧಿಸಿ ಲೋಕದಲ್ಲಿ ವಿವಿಧ ಕಂಪೆನಿಗಳು ಮತ್ತು ಸರಕಾರಗಳೊಂದಿಗೆ ಆಸ್ಟ್ರೊ ಒಪ್ಪಂದ ಮಾಡಿಕೊಂಡಿದೆ. ಒಂದು ವರ್ಷ ಪ್ರತಿರೋಧಿಸುವ ಶಕ್ತಿ ವ್ಯಾಕ್ಸಿನಿಗಿದೆ ಎಂದು ಆಸ್ಟ್ರೋದ ಸಿಇಒ ಫಾಸ್ಕಲ್ ಸೊರಿಯೋಟ್ ಜೂನ್‍ನಲ್ಲಿ ತಿಳಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.