ಸನ್ಮಾರ್ಗ ವಾರ್ತೆ
ಬೆಂಗಳೂರು: ಮುಖ್ತಾರ್ ಅಬ್ಬಾಸ್ ನಖ್ವಿ ಅವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒಂದು ಕಟ್ಟರವಾದಿ ಹಾಗೂ ಭಯೋತ್ಪಾದಕ ಸಂಘಟನೆ ಎಂದು ಕರೆದಿದ್ದನ್ನು ಪಕ್ಷವು ಖಂಡಿಸುತ್ತದೆ ಹಾಗೂ ತಕ್ಷಣ ಸಾರ್ವಜನಿಕ ಕ್ಷಮೆ ಕೇಳಬೇಕೆಂದು WPI ಆಗ್ರಹಿಸುತ್ತದೆ.
BJP ಸರ್ಕಾರದ ಕೇಂದ್ರೀಯ ಮಂತ್ರಿಯಾದ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಆಪಾದನೆ ಆಧಾರವಿಲ್ಲ. ಪಕ್ಷದ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಹೇಳಿದ ಹೇಳಿಕೆಯಿದು ಎಂದು WPI ರಾಷ್ಟ್ರೀಯ ಅಧ್ಯಕ್ಷರಾದ ಡಾ.SQR ಇಲಿಯಾಸ್ರವರು ಖಂಡಿಸಿದರು.
ಬಿಹಾರ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ BJP ಸರ್ಕಾರವು ತನ್ನ ಹಿಡಿತ ಕಳೆದುಕೊಳ್ಳುವ ಹತಾಶೆಯು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ BJP ಪಕ್ಷವು ತಮ್ಮ ಪ್ರಸಿದ್ಧ ವಿಧಾನಗಳಾದ ಮತದಾರರ ದಿಕ್ಕು ಬದಲಾಯಿಸುವುದು ಮತ್ತು ಧ್ರುವಿಕರಿಸುವುದನ್ನು ಬಳಸುತ್ತಿದೆ ಆದರೆ ಜನರು ಇದನ್ನು ತಿರಸ್ಕರಿಸುತ್ತಾರೆ ಎಂದು ಡಾ.ಇಲಿಯಾಸ್ ರವರು ಹೇಳಿದರು.
WPIಯು ಒಂದು ಜಾತ್ಯತೀತ ಮೌಲ್ಯ ಆಧಾರಿತ ಪಕ್ಷವಾಗಿದ್ದು ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಮತ್ತು ಜನರ ಸಮಸ್ಯೆಗಳನ್ನು ಯಾವಾಗಲೂ ಎತ್ತಿ ಹಿಡಿಯುತ್ತದೆ. ಒಂದು ರಾಜಕೀಯ ಪಕ್ಷವಾಗಿದ್ದರಿಂದ ಯಾವುದೇ ಪಕ್ಷವನ್ನು ಸಮರ್ಥಿಸುವ ಹಕ್ಕಿದೆ ಹಾಗೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಹಕ್ಕಿದೆ ಎಂದು ಅವರು ಹೇಳಿದರು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ BJP ಪಕ್ಷವು ನ್ಯಾಯೋಚಿತವಾಗಿ ಭಾಗವಹಿಸಬೇಕು ಹಾಗೂ ಇತರೆ ಪಕ್ಷಗಳನ್ನು ಭಾಗವಹಿಸಲು ಹಾಗೂ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಡಬೇಕೆಂದು ಡಾ.SQR ಇಲಿಯಾಸ್ರವರು ಹೇಳಿದರು.












