ಸನ್ಮಾರ್ಗ ವಾರ್ತೆ
ಫ್ರಾನ್ಸ್ನಲ್ಲಿ ಮತ್ತೆ ಆಕ್ರಮಣ ಭುಗಿಲೆದ್ದಿದೆ. ನೀಸ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂರು ಮಂದಿಯ ಕೊಲೆಯಾಗಿದೆ. ಓರ್ವ ಮಹಿಳೆಯ ಶಿರಚ್ಛೇದಗೊಳಿಸಿ ದುಷ್ಕರ್ಮಿ ವಿಕೃತಿ ಮೆರೆದಿದ್ದಾನೆ. ನೋತ್ರ ದಾಂ ಚರ್ಚ್ ಮತ್ತು ಸಮೀಪ ಪ್ರದೇಶಗಳಲ್ಲಿ ಸಂಭವಿಸಿದ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ನೀಸ್ ಮೇಯರ್ ಪ್ರತಿಕ್ರಿಯಿಸಿದ್ದಾರೆ.
ದಾಳಿಕೋರನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನೀಸ್ ಮೇಯರ್ ಕ್ರಿಸ್ಟಿಯನ್ ಎನ್ಟ್ರೋಸಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಸಮರ್ಪಕವಾದ ತನಿಖೆ ನಡೆಸಬೇಕೆಂದು ಫ್ರಂಚ್ ಆಂಟಿ ಟೆರರಿಸ್ಟ್ ಪ್ರೋಸಿಕ್ಯೂಟೇರ್ಸ್ ಡಿಪಾರ್ಟ್ಮೆಂಟ್ ಆಗ್ರಹ ವ್ಯಕ್ತಪಡಿಸಿದೆ.
ಆಕ್ರಮಣವನ್ನು ಫ್ರೆಂಚ್ ಕೌನ್ಸಿಲ್ ಫಾರ್ ಮುಸ್ಲಿಂ ಫೈತ್ ತೀವ್ರವಾಗಿ ಖಂಡಿಸಿದೆ.












