ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾರವರು “ಕೈಯ ಚಿಹ್ನೆಗೆ ಗುಂಡಿಯನ್ನು ಒತ್ತಿ ಮತ್ತು ಕಾಂಗ್ರೆಸ್ಗೆ ಮತ ಚಲಾಯಿಸಿ” ಎಂಬುದಾಗಿ ಹಳೆಯ ಧಾಟಿಯಲ್ಲಿಯೇ ಜನರಲ್ಲಿ ವಿನಂತಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
सिंधिया जी,
मध्यप्रदेश की जनता विश्वास दिलाती है कि तीन तारीख़ को हाथ के पंजे वाला बटन ही दबेगा। pic.twitter.com/dGJWGxdXad— MP Congress (@INCMP) October 31, 2020
ನವೆಂಬರ್ 3ರಂದು ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಮುನ್ನ ಸಿಂಧಿಯಾ ದಾಬ್ರಾದಲ್ಲಿ ಬಿಜೆಪಿಯ ಅಭ್ಯರ್ಥಿ ಇಮರ್ತಿ ದೇವಿ ಪರ ಪ್ರಚಾರ ನಡೆಸುತ್ತಿದ್ದರು.
ಬಿಜೆಪಿ ನಾಯಕನನ್ನು ಉದ್ದೇಶಿಸಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಸಿಂಧಿಯಾ ಜಿ, ಮಧ್ಯಪ್ರದೇಶದ ಜನರು ನವೆಂಬರ್ 3 ರಂದು ಕೈ ಚಿಹ್ನೆಗೆ ಮತ ನೀಡುವುದಾಗಿ ಭರವಸೆ ನೀಡುತ್ತಾರೆ.” ಎಂಬುದಾಗಿ ಟಾಂಗ್ ನೀಡಿದೆ.
ಮಾರ್ಚ್ ತಿಂಗಳಿನಲ್ಲಿ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.












