ಸನ್ಮಾರ್ಗ ನ್ಯೂಸ್
ನವದೆಹಲಿ: ಫ್ರಾನ್ಸ್ ನಲ್ಲಿ ನಡೆದ ಆಕ್ರಮಣಗಳ ಹಿನ್ನೆಲೆಯಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಮತ್ತು ಷಾರ್ಲಿ ಎಬ್ದೋರನ್ನು ಬೆಂಬಲಿಸುವಾಗ ಹಿಂದುತ್ವ ರಾಷ್ಟ್ರವಾದಿಗಳು ಭಾರತದ ಕುರಿತುಳ್ಳ ಫ್ರೀಡಂ ಹೌಸ್ ರಿಪೋರ್ಟ್ ಓದಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಹಿಂದುತ್ವವಾದಿಗಳು ಇಸ್ಲಾಮೋಫೋಬಿಯಾ ಕಾರಣವಿಟ್ಟು ಮಾಕ್ರೋನ್ರನ್ನು ಬೆಂಬಲಿಸುತ್ತಾರೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರದಿಂದಲ್ಲ ಎಂದು ಸೂಚಿಸುವ ಲೇಖನವನ್ನು ಪ್ರಶಾಂತ್ ಭೂಷಣ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಹಿಂದೂಗಳಲ್ಲದವರ ಮೇಲೆ ಧರ್ಮದ ಹೆಸರಿನಿಂದ ದೌರ್ಜನ್ಯ ಹೆಚ್ಚುತ್ತಿರುವುದರ ಜೊತೆಗೆ ಭಾರತದಲ್ಲಿ ಪತ್ರಕರ್ತರು ಮತ್ತು ಸರಕಾರವನ್ನು ವಿಮರ್ಶೆ ಮಾಡುವವರ ಮೇಲೆಯೂ ಆಕ್ರಮಣಗಳು ಹೆಚ್ಚುತ್ತಿದೆ ಎಂದು ಫ್ರೀಡಂ ಹೌಸ್ ರಿಪೋರ್ಟ್ ಹೇಳಿದೆ ಎಂದು ಭೂಷನ್ ಸೂಚಿಸಿದರು.
ಈ ಹಿಂದೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಫ್ರಾನ್ಸಿನೊಂದಿಗೆ ಭಾರತವೂ ಬೆಂಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಯಾವ ಸನ್ನಿವೇಶದಲ್ಲೂ ಭಯೋತ್ಪಾದನೆಯನ್ನು ಸಮರ್ಥನೆ ಮಾಡುವುದಿಲ್ಲ ಎಂದು ವಿದೇಶಾಂಗ ಸಚಿವಾಲ ಪ್ರಸ್ತಾವನೆಯಲ್ಲಿ ತಿಳಿಸಿತ್ತು.












