CAA ಕುರಿತು ದ್ವಂದ್ವ ಹೇಳಿಕೆ: ಇದು ನಿತೀಶ್-ಯೋಗಿಯ ಮೋಸದಾಟ- ಆರ್‌ಜೆಡಿ ಆರೋಪ

0
619

ಸನ್ಮಾರ್ಗ ವಾರ್ತೆ

ಪಾಟ್ನ,ನ.6: ಸಿಎಎಯ ಕುರಿತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾರಾ ಪ್ರಚಾರಕ ಯೋಗಿ ಆದಿತ್ಯನಾಥ್‍ರ ನಡುವಿನ ವಿವಾದಗಳು ಮೋಸದಾಟದಂತೆ ಕಂಡುಬರುತ್ತಿದೆ ಎಂದು ಆರ್‍ಜೆಡಿ ಆರೋಪಿಸಿದೆ. ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಎನ್‍ಡಿಎ ಘಟಕ ಪಕ್ಷಗಳಾದ ಬಿಜೆಪಿ ಜನತಾದಳ(ಯು) ಎಂದಿನ ತಂತ್ರ ಹೂಡಿದೆ ಎಂದು ಆರ್‌ಜೆಡಿ ನಾಯಕರು ಹೇಳುತ್ತಿದ್ದಾರೆ. ಒಂದು ಕಡೆ ಮುಸ್ಲಿಮ್ ವಿರೋಧ ಪ್ರಚಾರದಿಂದ ಹಿಂದೂ ಮತಗಳನ್ನು ಮತ್ತು ವಿರೋಧಿ ಧ್ವನಿಯಿಂದ ಮುಸ್ಲಿಮರು ಕೋಪಿಸದಂತೆ ನೋಡಿಕೊಳ್ಳುವ ಶ್ರಮವನ್ನು ನಿತೀಶ್ ಮಾಡಿದರು ಎಂದಿದ್ದಾರೆ.

ವಿವಾದ ವಿಷಯಗಳನ್ನು ಎತ್ತುವುದು ಮತ್ತು ಭಿನ್ನಾಭಿಪ್ರಾಯ ಪ್ರಕಟಿಸುವುದರಲ್ಲಿ ನಿತೀಶ್ ಮತ್ತು ಯೋಗಿ ನಡುವೆ ಒಪ್ಪಂದವಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದರು. ಇದು ಬಿಜೆಪಿ ಜೆಡಿಯು ಮೋಸದಾಟ. ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಬೇಕಾದ ಮಾತನ್ನು ಯೋಗಿ ಹೇಳಿದರು. ಸಿಎಎ ವಿರೋಧಿ ಪ್ರತಿಭಟನೆಯನ್ನು ಮೌನವಾಗಿ ನಿಂತು ನೋಡಿದವರು ನಿತೀಶ್ ಕುಮಾರ್. ಚಂಪಾರಣ್‍ನಲ್ಲಿ ಜೈ ಶ್ರೀರಾಮ್ ವಿಷಯ ಪ್ರಧಾನಿ ಹೇಳಿದಾಗ ಅವರು ತುಟಿ ಬಿಚ್ಚಿಲ್ಲ. ಬಿಜೆಪಿ ಜೆಡಿಯು ಜನರನ್ನು ವಂಚಿಸಲು ಯತ್ನಿಸುತ್ತಿದೆ ಎಂದರು.

ನುಸುಳುಕೋರರು ಭಾರತಕ್ಕೆ ಬರಲು ಯತ್ನಿಸಿದರೆ ಕೇಂದ್ರದ ಬಿಜೆಪಿ ಸರಕಾರ ಅವರನ್ನು ಭಾರತದಿಂದ ಹೊರಹಾಕುವುದೆಂದು ಯೋಗಿ ಕಟಿಹಾರದಲ್ಲಿ ಹೇಳಿದ್ದರು. ನುಸುಳುಕೋರ ಸಮಸ್ಯೆಗೆ ಮೋದಿ ಪರಿಹಾರ ಕಂಡು ಹುಡುಕಿದ್ದಾರೆ. ಸಿಎಎ ಉಪಯೋಗಿಸಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲದೇಶದಲ್ಲಿ ಹಿಂಸೆಗೆ ತುತ್ತಾದ ಅಲ್ಪಸಂಖ್ಯಾತರಿಗೆ ಸುರಕ್ಷೆಯನ್ನು ಅವರು ಕೊಟ್ಟಿದ್ದಾರೆ. ಇನ್ನು ಮುಂದೆ ಯಾವನೇ ನುಸುಳುಕೋರನನ್ನು ದೇಶ ಹೊರಹಾಕಲಿದೆ. ದೇಶದ ಸುರಕ್ಷೆಯೊಂದಿಗೆ ಯಾರನ್ನೂ ನಾವು ಸಹಿಸುವುದಿಲ್ಲ ಎಂದು ಆದಿತ್ಯನಾಥ್ ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿಕೆಯನ್ನು ಅಸಂಬದ್ಧ ಎಂದು ನಿತೀಶ್ ಕುಮಾರ್ ಹೇಳಿದ್ದು ಯಾರು ಇಂತಹ ಅನವಶ್ಯಕ ಮಾತು ಆಡುವುದು. ಕೆಲವರು ಕುಪ್ರಚಾರ ನಡೆಸುತ್ತಿದ್ದಾರೆ. ಯಾರನ್ನು ದೇಶದಿಂದ ಹೊರಗೆ ಹಾಕುವುದು. ಎಲ್ಲರೂ ಭಾರತೀಯರೇ, ಯಾರನ್ನು ಯಾರಿಗೂ ಹೊರಗೆ ಹಾಕುವ ಅಧಿಕಾರವಿಲ್ಲ ಎಲ್ಲರನ್ನೂ ಒಮ್ಮತದಿಂದ ಇರುವ ವಾತಾವರಣ ಸೃಷ್ಟಿಸಿ ಎಲ್ಲರನ್ನೂ ಒಂದಾಗಿರಿಸುವ ಯತ್ನವನ್ನು ಮಾಡುವೆವು ಎಂದು ನಿತೀಶ್ ಕುಮಾರ್ ಕಿಶನ್‌ಗಂಜ್‍ನಲ್ಲಿ ಹೇಳಿದ್ದರು.