ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.10: ಬಿಹಾರದಲ್ಲಿ ಮತ ಎಣಿಕೆ ಕೊನೆಗೊಳ್ಳುವವರೆಗೆ ಬಿಜೆಪಿಗೆ ನಿರೀಕ್ಷೆ ಇದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ಬಿಜೆಪಿ ಇಡೀ ದೇಶದಲ್ಲಿ ಉತ್ತಮ ರೀತಿಯಲ್ಲಿ ಮುನ್ನಡೆಯಲ್ಲಿದೆ ಎಂದು ಅವರು ಟ್ವೀಟ್ ಮಾಡಿದರು.
ಬಿಜೆಪಿ ಉತ್ತಮ ರೀತಿಯಲ್ಲಿ ಮುನ್ನಡೆ ಸಾಧಿಸುತ್ತಿದೆ. ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ತೆಲಂಗಾಣ ಉಪಚುನಾವಣೆಯಲ್ಲಿ ಸಾಧನೆ ಮಾಡುತ್ತಿದೆ. ಬಿಹಾರದ ವಿಷಯವನ್ನು ಮಾತ್ರ ಎತ್ತಿ ತೋರಿಸಬೇಕಾಗಿಲ್ಲ. ಸಖ್ಯ ಪಕ್ಷಗಳೊಂದಿಗೆ ಎಕ್ಸಿಟ್ ಪೋಲ್‍ನಲ್ಲಿ ಹೇಳಿದ್ದಕ್ಕಿಂತ ಉತ್ತಮ ಸಾಧನೆಯನ್ನು ಬಿಜೆಪಿ ಮಾಡುತ್ತಿದೆ. ಮತ ಎಣಿಕೆ ಮುಗಿಯುವವರೆಗೆ ಯಾವುದೂ ಮುಗಿಯುವುದಿಲ್ಲ ಎಂದು ಅಮಿತ್ ಮಾಳವೀಯ ಹೇಳಿದ್ದರು.
ಬಿಹಾರದ ಚುನಾವಣೆಯಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ. ಎನ್‍ಡಿಎ ಮುನ್ನಡೆ ಸಾಧಿಸುತ್ತಿದೆ.












