ತೇಜಸ್ವಿ ಯಾದವ್‌‌ಗೆ ಒಲಿದೀತೆ ಬಿಹಾರ?

0
406

ಸನ್ಮಾರ್ಗ ವಾರ್ತೆ

ಪಟ್ನಾ,ನ.10:ತೇಜಸ್ವಿ ಯಾದವ್-ರಾಹುಲ್ ಗಾಂಧಿ‌‌ಗೆ ಬಿಹಾರ ಒಲಿದೀತೆ? ಅಥವಾ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವರೇ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಕೆಲವು ಗಂಟೆಗಳು ಸಾಕು. ಇದೇ ವೇಳೆ 243 ಸದಸ್ಯರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ಕಟ್ಟಲು 122 ಶಾಸಕರ ಸಂಖ್ಯೆ ಅಗತ್ಯವಿದೆ. ಬೆಳಗ್ಗೆ ಮತ ಎಣಿಕೆ ಶುರುವಾಗಿದ್ದು ಮಧ್ಯಾಹ್ನದ ಮೊದಲೇ ಪೂರ್ಣ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

ಬಿಹಾರದಲ್ಲಿ ಕಳೆದ 15 ವರ್ಷಗಳಿಂದ ನಿತೀಶ್ ಕುಮಾರ್‌ರ ಎನ್‍ಡಿಎ ಸರಕಾರ ಇದೆ. ಕಳೆದ ಬಾರಿ ಎನ್‍ಡಿಎಯ ಜೊತೆ ಇದ್ದ ರಾಮ ವಿಲಾಸ್ ಪಾಸ್ವಾನ್‍ರ ಪುತ್ರ ಚಿರಾಗ್ ಪಾಸ್ವಾನ್‍ರ ಎಲ್‍ಜೆಪಿ ಈ ಸಲ ಸ್ವತಂತ್ರವಾಗಿ ಸ್ಪರ್ಧಿಸಿದೆ. ಜೆಡಿಯು ಸ್ಪರ್ಧಿಸುವ ಎಲ್ಲ ಸೀಟುಗಳಲ್ಲಿ ಅವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಎಕ್ಸಿಟ್ ಪೋಲ್ ಆರ್‌ಜೆಡಿ ನೇತೃತ್ವದ ಮಹಾಸಖ್ಯದ ಗೆಲುವಿನ ಸಾಧ್ಯತೆಯನ್ನು ಹೇಳಿದ್ದವು.ಆದರೆ ಬಿಹಾರದಲ್ಲಿ ಈಗ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಎನ್‍ಡಿಎ 106 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟ್‍ಬಂಧನ್‍ಗೆ 117 ಕಡೆ ಮಾತ್ರ ಮುನ್ನಡೆ ಇದೆ. ಉಳಿದಂತೆ ಪ್ರಬಲ ಹೋರಾಟ ಕಂಡು ಬಂದಿದ್ದು ತೇಜಸ್ವಿ ಯಾದವ್ ಅಥವಾ ಬಿಜೆಪಿ ಬಿಹಾರದಲ್ಲಿ ಅಧಿಕಾರ ಪಡೆಯಲಿದೆಯೇ ಎಂಬುದು ಮಾತ್ರ ನಿರ್ಣಯವಾಗಬಹುದು.

ಜೆಡಿಯು ಕೇವಲ 38 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 65 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಬಾರಿಗಿಂತ 12 ಸೀಟುಗಳನ್ನು ಅದು ಹೆಚ್ಚುವರಿಯಾಗಿ ಪಡೆಯಲಿದೆ ಎಂಬ ಸೂಚನೆ ವ್ಯಕ್ತವಾಗಿದೆ. ಸರಳ ಬಹುಮತ ಪಡೆದರೆ ಮಧ್ಯಪ್ರದೇಶ, ಕರ್ನಾಟಕಗಳಂತೆ ಆಪರೇಷ್ ಕಮಲದ ಮೂಲಕ ಬಿಜೆಪಿ ಬಿಹಾರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಬಹುತೇಕ ಇದೆ ಎಂದು ಹೇಳಲಾಗುತ್ತಿದೆ.