ಬಿಹಾರ: ಜೆಡಿಯು ಖಾತೆಗಳ ಮೇಲೆ ಬಿಜೆಪಿಯ ಹಕ್ಕುವಾದ

0
680

ಸನ್ಮಾರ್ಗ ವಾರ್ತೆ

ಪಾಟ್ನ,ನ.12: ಬಿಹಾರದ ಸಚಿವ ಸಂಪುಟ ರೂಪಿಸುವುದಕ್ಕಾಗಿ ಬಿಜೆಪಿ ಮತ್ತು ಜೆಡಿಯು ನಡುವೆ ಚರ್ಚೆಗಳು ಮುಂದುವರಿಯುತ್ತಿದೆ. ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲು ನಿತೀಶ್ ನಿರಾಕರಿಸುತ್ತಿದ್ದಾರೆ ಎಂಬ ವರದಿಗಳು ಹೊರಬಂದಿದೆ. ಆದರೆ ಹಿಂದಿನಂತೆ ನಾವು ನಿತೀಶ್‍ರನ್ನು ಬೆಂಬಲಿಸಲಿದ್ದೇವೆ ಎಂದು ಬಿಜೆಪಿ ತಿಳಿಸಿದೆ.

ಖಾತೆಗಳ ಹಂಚುವಿಕೆ ಸಂಬಂಧಿಸಿ ಚರ್ಚೆಗಳಲ್ಲಿ ಮಾಜಿ ಜೆಡಿಯು ಇದ್ದ ಗೃಹ, ಶಿಕ್ಷಣ ಮೊದಲಾದ ಖಾತೆಗಳನ್ನು ಬಿಜೆಪಿ ಕೇಳುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಎನ್‍ಡಿಎ ಸಣ್ಣ ಪಕ್ಷಗಳಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರಕಲಿದೆ. ನವೆಂಬರ್ 16ರಂದು ನಿತೀಶ್ ಸರಕಾರ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದೆ. ಇದೇವೇಳೆ ಎನ್‍ಡಿಎಯ ಸಣ್ಣ ಪಕ್ಷಗಳನ್ನು ಓಲೈಸಲು ಆರ್‌ಜೆಡಿ ಆರಂಭಿಸಿದೆ ಎಂದು ವರದಿಗಳು ಬರುತ್ತಿವೆ.