ಸನ್ಮಾರ್ಗ ವಾರ್ತೆ
ಸನ್ಆ,ನ.13: ಆಂತರಿಕ ಯುದ್ಧದಿಂದ ಜರ್ಜರಿತವಾದ ಯಮನ್ನಲ್ಲಿ ಪುನಃ ಆಹಾರ ಕ್ಷಾಮ ತಲೆದೋರಿದೆ. ಮಹಿಳೆಯರು ಮಕ್ಕಳ ಸಹಿತ ದೊಡ್ಡ ದುರಂತವನ್ನೇ ಯಮನ್ ಅನುಭವಿಸಲಿದೆ ಎಂದು ಕಳೆದ ದಿವಸ ವಿಶ್ವಸಂಸ್ಥೆ ಮುನ್ನೆಚ್ಚರಿಕೆ ನೀಡಿತು.
ನಾವು ಈಗ ಒಂದು ಮಹಾ ದುರಂತವನ್ನು ಎದುರಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಆಹಾರ ಸುರಕ್ಷಾ ಯೋಜನೆಯ ನಿರ್ದೇಶಕ ಡೆವಿಡ್ ಬಿಸ್ಲಿಂ ಬುಧವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದೆ ಹೇಳಿದರು. ನಾವು ಈ ಹಿಂದೆಯೂ ಇಲ್ಲಿಗೆ ಬಂದು ಈ ವಿಷಯವನ್ನು ಹೇಳಿದ್ದೇವೆ ಎಂದು ಅವರು ಹೇಳಿದರು.
ವಿಶ್ವದಲ್ಲಿ ಅತ್ಯಂತ ದೊಡ್ಡ ಮಾನವ ದುರಂತವನ್ನು ಯೆಮನ್ ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ದೇಶದಲ್ಲಿ 30 ಮಿಲಿಯನ್ ಜನರಲ್ಲಿ ಶೇ.80ರಷ್ಟು ಜನರಿಗೆ ಸಹಾಯದ ಅಗತ್ಯವಿದೆ. ಮಕ್ಕಳಲ್ಲಿ ಪೋಷಕಾಹಾರ ಕೊರತೆಯಿಂದ ಸಾವು ಸಂಭವಿಸುವುದು ಇಲ್ಲಿ ಸಾಮಾನ್ಯ ಎನಿಸಿಕೊಂಡಿದೆ.












