ವಿಕಾಸ್ ದುಬೆಯೊಂದಿಗೆ ಸಂಬಂಧ: ಕಾನ್ಪುರ ಮಾಜಿ ಪೊಲೀಸ್ ಮುಖ್ಯಸ್ಥ ಅಮಾನತು

0
634

ಸನ್ಮಾರ್ಗ ವಾರ್ತೆ

ಲಕ್ನೊ,ನ.13: ಎಂಟು ಪೊಲೀಸರ ಸಾವಿಗೆ ಕಾರಣವಾದ ಗೂಂಡಾ ಮುಖ್ಯಸ್ಥ ವಿಕಾಸ್ ದುಬೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದ್ದು ಕಾನ್ಪುರದ ಮಾಜಿ ಪೊಲೀಸ್ ಮುಖ್ಯಸ್ಥ ಅನಂತ್ ದೇವ್‍ರನ್ನು ಉತ್ತರಪ್ರದೇಶ ಸರಕಾರ ಅಮಾನತುಗೊಳಿಸಿದೆ.

ಈ ವಿಷಯವನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅನೀಷ್ ಕುಮಾರ್ ಅವಸ್ತಿ ತಿಳಿಸಿದ್ದಾರೆ. ಉತ್ತರ ಪ್ರದೇಶ ಡಿಐಜಿ ಸ್ಥಾನ ವಹಿಸಬೇಕಾಗಿದ್ದ ದೇವ್ ಈಗ ಮುರಾದಾಬಾದಿನಲ್ಲಿ ಪಿಎಸಿ ಮುಖ್ಯಸ್ಥರಾಗಿದ್ದಾರೆ. ಅಡಿಶನಲ್ ಚೀಫ್ ಸೆಕ್ರಟರಿ ಸಂಜಯ್ ಭೂಸ್‍ರೆಡ್ಡಿ, ಅಡಿಶನಲ್ ಡಿಪಜಿ ಹರಿರಾಮ್ ಶರ್ಮ, ಡಿಐಡಿ ರವೀಂದರ್ ಗೌಡ್‍ರನ್ನೊಳಗೊಂಡ ತನಿಖಾ ತಂಡ ಸಲ್ಲಿಸಿದ 3500 ಪುಟಗಳ ವರದಿಯಲ್ಲಿ ಗೂಂಡಾ ತಂಡಗಳೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಉನ್ನತ ಪೊಲೀಸರ ಸಹಿತ 80 ಪೊಲೀಸರ ಹೆಸರು ಇದೆ.

ಜುಲೈ ಎರಡಕ್ಕೆ ಕಾನ್ಪುರದ ಬಿಕ್ರಿ ಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಹಿಡಿಯಲು ಹೊರಟ ಎಂಟು ಪೊಲೀಸರನ್ನು ಆತನ ತಂಡ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ನಂತರ ಬಂಧಿಸಲಾದ ವಿಕಾಸ್ ದುಬೆಯನ್ನು ಕಸ್ಟಡಿಯಿಂದ ಓಡಿಹೋಗಲು ಯತ್ನಿಸಿದನೆಂದು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.