ಇರಾನ್‍ನೊಂದಿಗೆ ಅಣು ಒಪ್ಪಂದಕ್ಕೆ ಮರಳಬಾರದು: ಅಮೇರಿಕಗೆ ಮುನ್ನೆಚ್ಚರಿಕೆ ನೀಡಿದ ಇಸ್ರೇಲ್

0
401

ಸನ್ಮಾರ್ಗ ವಾರ್ತೆ

ಟೆಲ್‍ ಅವೀವ್,ನ.23: ಇರಾನಿನೊಂದಿಗಿನ ಅಣು ಒಪ್ಪಂದಕ್ಕೆ ಮರಳಬಾರದೆಂದು ಅಮೆರಿಕದೊಂದಿಗೆ ಇಸ್ರೇಲಿನ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಮುನ್ನೆಚ್ಚರಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೊ ಬೈಡನ್ ಇರಾನ್ ನೇತೃತ್ವದ 2015ರ ಅಣು ಒಪ್ಪಂದಕ್ಕೆ ಮರಳಬಾರದೆಂದು ಅವರು ಆಗ್ರಹಿಸಿದ್ದಾರೆ.

ಜನವರಿ 20ಕ್ಕೆ ಅಧಿಕಾರಕ್ಕೆ ಬರುವ ಜೊ ಬೈಡನ್ ಇರಾನ್‍ನೊಂದಿಗೆ ಸ್ಥಗಿತಗೊಳಿಸಿದ ಅಣು ಒಪ್ಪಂದಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿತ್ತು. ಇರಾನ್ ಅಣು ಒಪ್ಪಂದದ ಇತರ ದೇಶಗಳೊಂದಿಗೆ ಸಹಕರಿಸಿ ಅಸ್ಥಿರ ಚಟುವಟಿಕೆಗಳನ್ನು ನಿಲ್ಲಿಸಿದರೆ ಅಣು ಒಪ್ಪಂದವನ್ನು ಬಲಪಡಿಸಲು ಮತ್ತು ಮುಂದುವರಿಸುವುದಾಗಿ ಬೈಡನ್ ಹೇಳಿದ್ದರು.

ಇರಾನ್‍ಗೆ ಹೇರಲಾದ ಅಮೆರಿಕದ ದಿಗ್ಬಂಧವನ್ನು ಹಿಂಪಡೆಯುವುದಾದರೆ ಅಣು ಒಪ್ಪಂದಕ್ಕೆ ಮರಳಲು ತಯಾರೆಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಕಳೆದ ವಾರ ಹೇಳಿದ್ದರು.