ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‍ಡಿ ಫೆಲೊಶಿಪ್‍ ಮೊತ್ತ ಕಡಿತಗೊಳಿಸಿದ ರಾಜ್ಯ ಸರಕಾರ

0
390

ಸನ್ಮಾರ್ಗ ವಾರ್ತೆ

ಬೆಂಗಳೂರು,ನ.23: ಕರ್ನಾಟಕದ ಅಲ್ಪಸಂಖ್ಯಾತ ವಿಭಾಗದ ಪಿಎಚ್‍ಡಿ, ಎಂಫಿಲ್ ವಿದ್ಯಾರ್ಥಿಗಳ ಫೆಲೊಶಿಪ್‍ನ ಹಣವನ್ನು ಸರಕಾರ ಕಡಿತಗೊಳಿಸಿದೆ.ಈಗಿರುವ ಮೊತ್ತದಲ್ಲಿ ಶೇ.66ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಬಿಜೆಪಿ ಸರಕಾರ ಕೈಗೊಂಡಿರುವುದು ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ದೊಡ್ಡ ಹಿನ್ನಡೆಯಾಗಲಿದೆ. ಈಗ ತಿಂಗಳಿಗೆ 25,000ರೂಪಾಯಿ ಫೆಲೊಶಿಪ್ ನೀಡಲಾಗುತ್ತಿದೆ. 8,333ರೂ. ಕಡಿಮೆ ಮಾಡಲಾಗಿದೆ. ಕೊರೋನದಿಂದುಂಟಾದ ಆರ್ಥಿಕ ತೊಂದರೆಯ ಹಿನ್ನೆಲೆಯಲ್ಲಿ ಫೆಲೊಶಿಪ್ ಮೊತ್ತವನ್ನು ಕಡಿಮೆ ಮಾಡಿರುವುದಾಗಿ ಅಲ್ಪಸಂಖ್ಯಾತ ನಿರ್ದೇಶನಾಲಯಯದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಂಶೋಧನೆ ನಡೆಸುತ್ತಿರುವ 250 ವಿದ್ಯಾರ್ಥಿಗಳನ್ನು ತೊಂದರೆಗೊಳಪಡಿಸಲಿದೆ.

ತೀರ್ಮಾನವನ್ನು ಹಿಂಪಡೆಯಬೇಕೆಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್‍ರನ್ನು ಭೇಟಿಯಾಗಲು ವಿದ್ಯಾರ್ಥಿಗಳು ಶ್ರಮಿಸಿದರು ಅನುಮತಿ ದೊರೆಯಲಿಲ್ಲ. ಇದರೊಂದಿಗೆ ಮೂರು ವರ್ಷದೊಳಗೆ ಪಿಎಚ್‍ಡಿ ಪೂರ್ತಿ ಮಾಡಿದಿದ್ದರೆ ಶೇ.12ರಷ್ಟು ಬಡ್ಡಿ ಸೇರಿಸಿ ಫೆಲೊಶಿಪ್ ಮೊತ್ತವನು ಸಂಪೂರ್ಣ ಮರಳಿಸಬೇಕೆಂಬ ಆದೇಶವನ್ನೂ ಅಲ್ಪಸಂಖ್ಯಾತ ನಿರ್ದೇಶನಾಲಯ ಹೊರಡಿಸಿದೆ. ಈ ತೀರ್ಮಾನದ ವಿರುದ್ಧ ಸಂಶೋಧಕರ ಒಕ್ಕೂಟ ಹಾಗೂ ಮಾಜಿ ಸಚಿವ ಯುಟಿ ಖಾದರ್ ಸಹಿತ ಹಲವು ನಾಯಕರು ಪತ್ರ ಬರೆದಿದ್ದಾರೆ.