ಏಕಪಕ್ಷೀಯ ಆದೇಶಗಳಿಂದ ಅರ್ಥವ್ಯವಸ್ಥೆ ಚೇತರಿಸದು- ರಾಹುಲ್ ಗಾಂಧಿ

0
440

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.28: ಭಾರತದ ಅರ್ಥ ವ್ಯವಸ್ಥೆಯ ಪತನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಭಾರತದ ಎರಡನೇ ಪಾದ ಜಿಡಿಪಿ ಶೇ.7.5ಕ್ಕೆ ಕುಸಿದು ಸಾಂಕೇತಿಕವಾಗಿ ದೇಶ ಮಾಂದ್ಯಕ್ಕೆ ಹೊರಳಿದ್ದರಿಂದ ಇತಿಹಾಸದಲ್ಲಿಇದೇ ಮೊದಲ ಸಲ ಭಾರತದಲ್ಲಿ ಹೀಗಾಗಿದೆ ಎಂದು ಹೇಳಿದ್ದಾರೆ.

ಈಗಲೂ ಮೂರು ಕೋಟಿ ಜನರು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏಕಪಕ್ಷೀಯವಾದ ಆದೇಶಗಳಿಂದ ಅರ್ಥವ್ಯವಸ್ಥೆಯ ಚೇತರಿಕೆ ಆಗದು. ಅರ್ಥ ವ್ಯವಸ್ಥೆಗೆ ಬಾಧಕವಾಗಿರುವ ಮೂಲ ವಿಷಯಗಳನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳಬೇಕೆಂದು ರಾಹುಲ್ ಆಗ್ರಹಿಸಿದರು.

ಆರ್ಥಿಕ ವರ್ಷದ ಎರಡನೆ ಪಾದದಲ್ಲಿ ಭಾರತದ ಅರ್ಥವ್ಯವಸ್ಥೆ ಕುಸಿತ ದಾಖಲಿಸಿದೆ. ಮೊದಲ ಪಾದದಲ್ಲಿ ಜಿಡಿಪಿಯಲ್ಲಿ ಶೇ. 23ರಷ್ಟು ಕುಸಿತ ಆದಾಗ ಎರಡನೇ ಪಾದದಲ್ಲಿ ಶೇ.7.5 ಕುಸಿತ ಆಗಿದೆ. ಇದರೊಂದಿಗೆ ಭಾರತದ ಅರ್ಥವ್ಯವಸ್ಥೆ ಸಾಂಕೇತಿಕವಾಗಿ ಮಾಂದ್ಯಕ್ಕೆ ಹೋಗಿ ಬಿದ್ದಿದೆ.