ಬುರೈವಿ ಚಂಡಮಾರುತ: ಕೇರಳದ 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

0
511

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಡಿ.4: ಇಂದು ಕೇರಳದ ಒಂಬತ್ತು ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದ್ದು ತಿರುವನಂತಪುರಂ, ಕೊಲ್ಲಂ, ಇಡುಕ್ಕಿ, ಕೋಟ್ಟಯಂ, ಪತ್ತನಂತಿಟ್ಟ, ಎರ್ನಾಕುಳಂ, ಕಲ್ಲಿಕೋಟೆ, ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ತಿಳಿಸಿದಂತೆ ಮಳೆ ಬರುವ ಸಾಧ್ಯತೆಗಳಿವೆ.

ಬುರೈವಿ ಚಂಡಮಾರುತ ಇಂದು ಕೇರಳ ತೀರಕ್ಕೆ ಅಪ್ಪಳಿಸುವ ಕಾರಣದಿಂದ ಮಳೆ ಬರುತ್ತದೆ ಎಂದು ಇಲಾಖೆಯು ತಿಳಿಸಿದ್ದು, ದಕ್ಷಿಣ ಕೇರಳದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆಯನ್ನು ಸರಕಾರ ಹೊರಡಿಸಿದೆ. ಇಂದು ಐದು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಗಾಳಿಯ ವೇಗ ಕಡಿಮೆಯಾಗಿರುವುದು ಸಮಧಾನಕರ ಅಂಶವಾಗಿದ್ದು ಗಂಟೆಗೆ 55-65 ಕಿ.ಮೀ ವೇಗದಲ್ಲಿ ಗಾಳಿಯಿದೆ. ಹೆಚ್ಚಿನ ಹಾನಿಮಾಡದೆ ಬುರೈವಿ ಚಂಡಮಾರುತ ಅರಬ್ಬಿ ಸಮುದ್ರಕ್ಕೆ ಹೋಗಬಹುದೆಂದು ಈಗ ಭಾವಿಸಿಕೊಳ್ಳಲಾಗಿದೆ.

ಆದರೂ ಕೇರಳದಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ತಿರುವನಂತಪುರಂನಿಂದ ಮಲಪ್ಪುರಂ ಜಿಲ್ಲೆಯವರೆಗೆ ಎಲ್ಲೋ(yellow) ಅಲರ್ಟ್ ಅನ್ನು ಸರಕಾರ ಘೋಷಿಸಿತು. ತಮಿಳ್ನಾಡಿನಲ್ಲಿ ಸಂಚರಿಸುವ ನಿಮ್ನ ಒತ್ತಡ ದುರ್ಬಲಗೊಂಡು ಕೇರಳಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಹೋಗದಂತೆ ನಿಷೇಧ ಹೇರಲಾಗಿದೆ.