ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್‍ನಲ್ಲಿ ಬಿಜೆಪಿಗೆ ಮುನ್ನಡೆ

0
780

ಸನ್ಮಾರ್ಗ ವಾರ್ತೆ

ತೆಲಂಗಾಣ,ಡಿ.4: ಗ್ರೇಟರ್ ಹೈದರಾಬಾದ್ ಮುನ್ಸಿಪಾಲಿಟಿ ಕಾರ್ಪೊರೇಷನ್(ಜಿಎಚ್‍ಎಂಸಿ) ಚುನಾವಣೆಯಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು ಇತ್ತೀಚೆಗಿನ ಲೆಕ್ಕ ಪ್ರಕಾರ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. ಬಿಜೆಪಿ 62 ಸೀಟುಗಳಲ್ಲಿ ಮುನ್ನಡೆ ಗಳಿಸಿದೆ. 31 ಸೀಟುಗಳಲ್ಲಿ ಟಿಆರ್‌ಸಿ ಮುನ್ನಡೆ ಹೊಂದಿದೆ. ಎಐಎಂಐಎಂ ಹತ್ತು ಸೀಟುಗಳಲ್ಲಿ ಮುನ್ನಡೆ ಹೊಂದಿದೆ.

150 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿದ್ದು, 24 ವಿಧಾನಸಭಾ ಕ್ಷೇತ್ರಗಳು ಜಿಎಚ್‍ಎಂಸಿ ವ್ಯಾಪ್ತಿಯಲ್ಲಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ 150 ವಾರ್ಡ್‌ಗಳಲ್ಲಿ ತೆಲಂಗಾಣ ರಾಷ್ಟ್ರಸೇವಾ ಸಮಿತಿ 99 ಸೀಟುಗಳನ್ನು ಗೆದ್ದುಕೊಂಡಿತ್ತು.