ಉಡುಪಿ: N.D.R.F ಅಣುಕು ಪ್ರದರ್ಶನದಲ್ಲಿ ಭಾಗಿಯಾದ HRS ತಂಡ

0
773

ಸನ್ಮಾರ್ಗ ವಾರ್ತೆ

ಉಡುಪಿ: ಉದ್ಯಾವರದ ಪಾಪನಾಶಿನಿ ಹೊಳೆಯಲ್ಲಿ, ನೆರೆ ಬಂದಾಗ ಹಾಗೂ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೇಗೆ ರಕ್ಷಿಸಬಹುದೆಂದು ಕೇಂದ್ರ ಸರಕಾರದ ಏನ್. ಡಿ. ಆರ್.ಎಫ್ ತಂಡವು ಅಣುಕು ಪ್ರದರ್ಶನವನ್ನು ಹಮ್ಮಿಕೊಂಡ್ಡಿದ್ದು, ಇದರಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಹೆಚ್,ಆರ್.ಎಸ್‌ನ ಸುಮಾರು 20 ಸದಸ್ಯರು ಪಾಲ್ಗೊಂಡರು.

ನೀರಿನಲ್ಲಿ ಮುಳುಗಿದಾಗ ವ್ಯಕ್ತಿಯು ಪ್ರಥಮವಾಗಿ ತನ್ನನ್ನು ರಕ್ಷಿಸಿಕೊಳ್ಳುವ ಮತ್ತು ಇತರರನ್ನು ರಕ್ಷಿಸುವ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಲಾಯಿತು.

N. D. R. F ನ ಪ್ರಾಯೋಜಕತ್ವದಲ್ಲಿ ನಡೆದ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್, ಅಗ್ನಿ ಶಾಮಕ ದಳದ ಅಧಿಕಾರಿಗಳು, ಅರೋಗ್ಯ ಇಲಾಖೆಯವರು, ಹೋಮ್ ಗಾರ್ಡ್‌ ಅಧಿಕಾರಿಗಳು ಭಾಗವಹಿಸಿದ್ದರು.

ಎಚ್.ಆರ್.ಎಸ್‌ ಕ್ಯಾಪ್ಟನ್ ಅಮೀರ್ ಸಿದ್ದೀಕ್, ಉಡುಪಿಯ ಸಂಚಾಲಕ ಹಸನ್ ಕೋಡಿಬೆಂಗ್ರೆ, ಬಿಲಾಲ್ ಮಲ್ಪೆ, ಅಬ್ದುಲ್ ಗಫುರ್ ಕುಳಾಯಿ, ಮುನವ್ವರ್, ಅನ್ವರ್ ಅಲಿ ಕಾಪು, ಸಲೀಮ್ ತೀರ್ಥಹಳ್ಳಿ ಮುಂತಾದ ಪ್ರಮುಖರು ಭಾಗವಹಿಸಿದ್ದರು.