ಸನ್ಮಾರ್ಗ ವಾರ್ತೆ
ಚೆನ್ನೈ,ಡಿ.5: ಮುಂಬರುವ ವಿಧಾನ ಸಭೆಯಲ್ಲಿ ತಮಿಳ್ನಾಡಿನ ಎಲ್ಲ ಕ್ಷೇತ್ರಗಳಲ್ಲಿ ರಜನೀಕಾಂತ್ ಪಾರ್ಟಿ ಸ್ಪರ್ಧಿಸಲಿದೆ. ಜನವರಿಯಲ್ಲಿ ಪಾರ್ಟಿ ಕಾರ್ಯಾರಂಭಿಸಲಿದ್ದು ತಮಿಳ್ನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿವೆ. ತಮ್ಮದು ಸಾತ್ವಿಕ ರಾಜಕೀಯವೆಂದು ಪಾರ್ಟಿಯ ಮೂಲಗಳು ತಿಳಿಸಿವೆ. ಜನರು ದ್ವೇಷಿಸುವ ರಾಜಕೀಯ ನಮ್ಮ ಗುರಿಯಲ್ಲ. ನಾವು ಯಾರನ್ನೂ ಆಕ್ಷೇಪಿಸಲು ಬಯಸುವುದಿಲ್ಲ ಎಂದು ರಜನೀಕಾಂತರ ರಾಜಕೀಯ ಕಾರ್ಯದರ್ಶಿ ತಮಿಳರುವಿ ಮಣಿಯನ್ ಹೇಳಿದರು.
ವರ್ಷಗಳಿಂದ ರಾಜಕೀಯ ಪ್ರವೇಶಿಸುವ ಅನಿಶ್ಚಿತತೆಗಳಿಗೂ ವದಂತಿಗಳಿಗೂ ವಿರಾಮ ಹಾಕಿ ಕಳೆದ ದಿವಸ ರಜನೀಕಾಂತ್ ರಾಜಕೀಯ ಪ್ರವೇಶಿಸುವ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪಾರ್ಟಿಯ ಘೋಷಣೆಯನ್ನು ಈ ತಿಂಗಳು 31ಕ್ಕೆ ಮಾಡಲಿದ್ದಾರೆ ಎಂದು ಅವರೇ ಟ್ವೀಟ್ ಮಾಡಿದ್ದಾರೆ. ರಜನೀ ಮಕ್ಕಳ್ ಮುನ್ರಂ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಒಂದು ದಿವಸದ ನಂತರ ಈ ತೀರ್ಮಾನ ಹೊರಬಂದಿದೆ. ಜಿಲ್ಲಾ ಪದಾಧಿಕಾರಿಗಳು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾನು ಯಾವ ತೀರ್ಮಾನ ತೆಗೆದುಕೊಂಡರೂ ತನ್ನ ಜೊತೆ ಇರುತ್ತೇವೆ ಎಂದು ತಿಳಿಸಿದ್ದಾರೆ ಎಂದು ಅವರು ಪಾಯಸ್ ಗಾರ್ಡನ್ನ ತಮ್ಮ ವಸತಿಯಲ್ಲಿ ರಜನೀಕಾಂತ್ ತಿಳಿಸಿದ್ದಾರೆ.












