ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.8: ರೈತ ಹೋರಾಟದ ಅಂಗವಾಗಿ ಘೊಷಣೆಯಾದ ಭಾರತ ಬಂದ್‍ನಿಂದ ದಿಲ್ಲಿ-ಮೀರತ್ ರಸ್ತೆ ಸ್ತಂಭಿಸಿದೆ. ಹನ್ನೊಂದು ಗಂಟೆಯಿಂದ ಮೂರು ಗಂಟೆಯವರೆಗೆ ಬಂದ್ ಇತ್ತು. ದಿಲ್ಲಿ, ಹರಿಯಾಣದ ಹಲವು ಪ್ರಧಾನ ರಸ್ತೆಗಳಲ್ಲಿ ರೈತರು ಒಗ್ಗೂಡಿದ್ದಾರೆ. ಕಾಂಗ್ರೆಸ್, ಆಮ್ ಆದ್ಮಿ, ಡಿಎಂಕೆ ಸಿಪಿಎಂ ಮೊದಲಾದ ಪ್ರತಿಪಕ್ಷಗಳು ಹೋರಾಟವನ್ನು ಬೆಂಬಲಿಸಿದೆ. ಆದರೆ ಹೋರಾಟಕ್ಕೆ ಬೆಂಬಲ ನೀಡಲು ನಾಯಕರು ಬರುವುದನ್ನು ತಡೆಯಲು ಪೊಲೀಸರು ಕ್ರಮ ಜರಗಿಸುತ್ತಿದ್ದಾರೆ.
ಭೀಮ ಆದ್ಮಿ ನಾಯಕ ಚಂದ್ರಶೇಖರ ಆಝಾದ್, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸುಭಾಷಿಣಿ ಆಲಿ ಮುಂತಾದ ನಾಯಕರನ್ನು ಪೊಲೀಸರು ಗೃಹ ಬಂಧನದಲ್ಲಿಸಿದ್ದಾರೆ. ಆದರೆ, ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೊದಲ್ಲಿ ಅತ್ಯಂತ ದೊಡ್ಡ ಹಣ್ಣು-ತರಕಾರಿ, ಸಂತೆ, ಮುಂಬೈ ವಾಸಿಯ ರೈತ ಸಂತೆ ಬಂದ್‍ನಿಂದ ಬಾಗಿಲು ತೆರದಿಲ್ಲ. ತೆಲಂಗಾಣದ ಆಡಳಿತ ಪಾರ್ಟಿ ಟಿಆರ್‍ಎಸ್, ತಮಿಳ್ನಾಡಿನ ಡಿಎಂಕೆ ಹೋರಾಟವನ್ನು ಬೆಂಬಲಿಸಿದೆ.












