ರೈತರನ್ನು ಬೆಂಬಲಿಸಿ ಅಣ್ಣಾ ಹಝಾರೆ ರಂಗ ಪ್ರವೇಶ: ಏಕದಿನ ಉಪವಾಸ ಸತ್ಯಾಗ್ರಹ

0
646

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.8: ರೈತ ವಿರೋಧಿ ಕಾನೂನಿನ ವಿರುದ್ಧ ಅಣ್ಣಾ ಹಝಾರೆಯವರು ಕಣಕ್ಕಿಳಿದಿದ್ದು ಏಕದಿನ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ರಲಿಗಾಂವ್ ಸಿದ್ದಿಯಲ್ಲಿ ಪದ್ಮಾದೇವಿ ಮಂದಿರದ ಸಮೀಪ ಮಾಡಿದರು. ರೈತರ ಹಿತಕ್ಕೆ ತಕ್ಕಂತೆ ತೀರ್ಮಾನ ಮಾಡಲು ಕೇಂದ್ರ ಸರಕಾರವನ್ನು ಪ್ರೇರೇಪಿಸಲು ಎಲ್ಲ ರೈತರು ಹೋರಾಟಕ್ಕೆ ಬರಬೇಕೆಂದು ಅಣ್ಣಾ ಹಝಾರೆ ಆಗ್ರಹಿಸಿದ್ದಾರೆ. ನಂತರ ಏಕದಿನ ಉಪವಾಸ ಸತ್ಯಾಗ್ರಹವನ್ನು ‘ಭಾರತ ಬಂದ್’ ದಿನ ಮಾಡುವುದಾಗಿ ಅವರು ಹೇಳಿದರು.

2011ರಲ್ಲಿ ಜನ್ ಲೋಕಪಾಲ ಮಸೂದೆಗಾಗಿ ದಿಲ್ಲಿಯಲ್ಲಿ ಅಮರಣಾಂತ ಉಪವಾಸ ಕೂತ ಪ್ರಸಿದ್ಧಿಗೇರಿದ ಅಣ್ಣಾ ಹಝಾರೆ ರೈತರ ಸಮಸ್ಯೆಗೆ ಖಾಯಂ ಪರಿಹಾರ
ಬೇಕೆಂದು ಹೇಳಿದ್ದರು. 2017ಕ್ಕಿಂತ ಮೊದಲು ಮೋದಿ ಸರಕಾರ ತನಗೆ ರೈತ ಕ್ಷೇತ್ರದ ಕುರಿತು ಹಲವಾರು ಭರವಸೆ ಕೊಟ್ಟಿತ್ತು. ಆದರೆ ಯಾವುದನ್ನೂ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಇದೇ ವೇಳೆ ರೈತ ಹೋರಾಟಕ್ಕೆ ಬೆಂಬಲಿಸಿದ ಹಝಾರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸಂಘಪರಿವಾರದ ಕೊಳಲು ವಾದಕ ಹಝಾರೆ. ರೈತ ಪ್ರತಿಭಟನೆಗೆ ಜನ ಬೆಂಬಲ ಸಿಕ್ಕಿದ್ದನ್ನು ನೋಡಿ ಅವರು ಈಗ ರಂಗಕ್ಕೆ ಬಂದಿದ್ದಾರೆ ಎಂದು ಟೀಕಿಸುತ್ತಿದ್ದಾರೆ.