ಸನ್ಮಾರ್ಗ ವಾರ್ತೆ
ಮಕ್ಕ,ಡಿ.10: ಹರಮ್ ಕ್ರೈನ್ ಅವಘಡ ಪ್ರಕರಣದಲ್ಲಿ ಬಿನ್ ಲಾದೆನ್ ಗ್ರೂಪ್ ಸಹಿತ 13 ಆರೋಪಿಗಳನ್ನು ಮಕ್ಕದ ಕ್ರಿಮಿನಲ್ ಕೋರ್ಟು ಆರೋಪ ಮುಕ್ತಗೊಳಿಸಿದೆ.
ಬುಧವಾರ ಇದಕ್ಕೆ ಸಂಬಂಧಿಸಿದ ತೀರ್ಪನ್ನು ಕ್ರಿಮಿನಲ್ ಕೋರ್ಟು ಹೊರಡಿಸಿದೆ ಎಂದು ಪ್ರಾದೇಶಿಕ ಪತ್ರಿಕೆಗಳು ವರದಿ ಮಾಡಿವೆ. ಈ ಹಿಂದೆ ವಿಚಾರಣೆಯಲ್ಲಿ ತೀರ್ಪು ನೀಡಲಾಗಿತ್ತು. ಅಷ್ಟನ್ನಲ್ಲದೆ ಬೇರೇ ಹೊಸದೇನನ್ನೂ ಸಾಬೀತು ಪಡಿಸಲು ಆಗಿಲ್ಲ. ಸೂಕ್ಷ್ಮ ಪರಿಶೀಲನೆಗಾಗಿ ಹೊಸ ತೀರ್ಪಿನ ಪ್ರಸ್ತಾವವನ್ನು ಅಪೀಲು ಕೋರ್ಟಿಗೆ ಕಳುಹಿಸಲಾಗುವುದು ಎಂದು ಕೋರ್ಟು ತಿಳಿಸಿದೆ. ದುರಂತ ಸಂಭವಿಸಿದ ದಿನ ಹವಮಾನ ನಿರೀಕ್ಷಣಾ ಕೇಂದ್ರದ ಬುಲೆಟಿನ್ ಕೆಂಪು ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 30 ಕಿಲೊ ಮೀಟರ್ ಮಾತ್ರ ಇದೆ ಎಂದು ತಿಳಿಸಿತ್ತು.
ಅವಶ್ಯಕವಾದ ಎಚ್ಚರಿಕೆಯನ್ನು ಮುಂಜಾಗರೂಕತೆಯನ್ನು ವಹಿಸಬೇಕಾದ ರೀತಿಯಲ್ಲಿ ಗಾಳಿಯ ವೇಗ ಇರುತ್ತದೆ ಎಂದು ಮುನ್ನೆಚ್ಚರಿಕೆಯಿರಲಿಲ್ಲ ಎಂದು ಕೋರ್ಟು ಹೇಳಿದೆ. ಅವಘಡ ಆಗುತ್ತದೆ ಎಂದು ಇರುವ ಹವಾಮಾನ ಕೇಂದ್ರದ ಮುನ್ನೆಚ್ಚರಿಕೆಯನ್ನು ಕೋರ್ಟಿನಿಂದ ಕಂಡು ಹುಡುಕಲು ಸಾಧ್ಯವಾಲಿಲ್ಲ. ಅಂದು ಸೂಕ್ತವಾದ ಮುನ್ನೆಚ್ಚರಿಕೆಯಿಲ್ಲದೇ ಸಂಭವಿಸಿದರೆ ಪ್ರಾಕೃತಿಕ ವಿಪತ್ತು ಅಥವಾ ಅಂಟು ರೋಗದಂತೆ ಸಂಭವಿಸದ ದುರಂತ ಇದೆಂದು ಕೋರ್ಟು ನಿರೀಕ್ಷಿಸಿದೆ.












