ಕೇರಳ| ಈ ಬಾರಿ ಮತದಾನದಿಂದ ವಂಚಿತರಾದ ನಟ ಮಮ್ಮುಟ್ಟಿ; ಕಾರಣವೇನು ಗೊತ್ತಾ!!

0
706

ಸನ್ಮಾರ್ಗ ವಾರ್ತೆ

ಕೊಚ್ಚಿ,ಡಿ.10: ಮತದಾರಪಟ್ಟಿಯಲ್ಲಿ ಹೆಸರಿಲ್ಲದ್ದರಿಂದ ಮಳೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಈ ಸಲ ವೋಟು ಹಾಕಲು ಆಗಿಲ್ಲ. ಪನಂಪಳ್ಳಿಯಿಂದ ಕಡಂಬ್ರಕ್ಕೆ ಮಮ್ಮುಟ್ಟಿ ವಾಸ ಬದಲಾಯಿಸಿದ್ದರು. ಆದ್ದರಿಂದ, ಪನಂಪಳ್ಳಿ ನಗರದ ಮತದಾರರ ಪಟ್ಟಿಯಿಂದ ಮಮ್ಮುಟ್ಟಿಯ ಹೆಸರನ್ನು ತೆಗೆದುಹಾಕಲಾಗಿತ್ತು. ಆದ್ದರಿಂದ ಮೇಘಾಸ್ಟಾರ್ ಮಮ್ಮುಟ್ಟಿಗೆ ಮತದಾನ ವಂಚಿತರಾಗಿದ್ದಾರೆ.

ಶೂಟಿಂಗ್ ನಿಬಿಡತೆಯ ನಡುವೆಯೂ ಮತಹಾಕಲು ಮಮ್ಮುಟ್ಟಿ ಬರುತ್ತಿದ್ದರು. ಬುಧವಾರ ಮತದಾರ ಪಟ್ಟಿ ನೋಡಿದಾಗ ಮಮ್ಮುಟ್ಟಿಯ ಹೆಸರು ಇಲ್ಲದ್ದು ಗೊತ್ತಾಗಿದೆ. ಎಲ್ಲ ಚುನಾವಣೆಯ ವೇಳೆ ಪನಂಪಳ್ಳಿ ನಗರದ ಶಾಲೆಯಲ್ಲಿ ಮಮ್ಮುಟ್ಟಿ ಮತ ಹಾಕುತ್ತಿದ್ದರು.