ಸನ್ಮಾರ್ಗ ವಾರ್ತೆ
ಟೆಹ್ರಾನ್,ಡಿ.11: ಇರಾನ್ ಮತ್ತು ಇತರ ದೇಶಗಳು ಸೇರಿ ಮಾಡಿಕೊಂಡಿದ್ದ ಅಣು ಒಪ್ಪಂದಕ್ಕೆ ಮರಳಲು ಒಂದು ಸಹಿ ಸಾಕಾಗುತ್ತದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದರು. ಒಪ್ಪಂದಕ್ಕೆ ಮರಳಲು ಹೆಚ್ಚಿನ ಸಮಾಲೋಚನೆ ಬೇಕಿಲ್ಲ ಎಂದೂ ಅವರು ಬುಧವಾರ ಕ್ಯಾಬಿನೆಟ್ ಮೀಟಿಂಗ್ನ ಬಳಿಕ ಹೇಳಿದರು.
2018ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದಿಂದ ಹಿಂದೆ ಸರಿದಿದದ್ದು ಒಂದು ತುಂಡು ಕಾಗದಲ್ಲಿ ಬರೆಯುವ ಮೂಲಕ ಇದು ನಡೆದಿತ್ತು. ಮುಂದೆ ಅಧಿಕಾರಕ್ಕೆ ಬರುವ ವ್ಯಕ್ತಿಗೆ ಒಂದು ಕಾಗದದಲ್ಲಿ ಸಹಿ ಹಾಕುವ ಅಗತ್ಯವಷ್ಟೇ ಇದೆ. ನಾವು ಎಲ್ಲಿದ್ದೆವೋ ಅಲ್ಲಿಗೆ ಮರಳುತ್ತೇವೆ. ಅದಕ್ಕೆ ಹೆಚ್ಚಿನ ಸಮಯ ಚರ್ಚೆಗಾಗಿ ವ್ಯಯಿಸುವ ಅಗತ್ಯವಿಲ್ಲ ಎಂದು ರೂಹಾನಿ ಹೇಳಿದರು.
ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಚೀನ, ರಷ್ಯ, ಇರಾನ್ ಅಮೆರಿಕ ಇರಾನ್ ಒಪ್ಪಂದದಲ್ಲಿತ್ತು. ಇದರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಅಮೆರಿಕ ಹಿಂದೆ ಸರಿದಿತ್ತು. ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಒಪ್ಪಂದಕ್ಕೆ ಮರಳುವುದಾಗಿ ತಿಳಿಸಿದ್ದರು.












