ಸನ್ಮಾರ್ಗ ವಾರ್ತೆ
ವರದಿ: ಹಸನುಲ್ ಬನ್ನ
ಸಿಂಘು ಗಡಿಯಲ್ಲಿ ದಿಲ್ಲಿ ಪೊಲೀಸರ ಬ್ಯಾರಿಕೇಡು ದಾಟಿ ಹೋರಾಟದ ಸ್ಥಳಕ್ಕೆ ಪ್ರವೇಶಿಸುವಾಗ ಮೊದಲು ಪಂಜಾಬಿಗಳ ಲಂಗರುಗಳು ಕಾಣಿಸುತ್ತವೆ. ಚಪ್ಪರದಲ್ಲಿ ಗೋಣಿಗಳಲ್ಲಿ ಬಾದಾಮು, ಗೋಡಂಬಿ, ಏಲಕ್ಕಿ ಇತರ ಸುಗಂಧ ವಸ್ತುಗಳು ಪುಡಿಮಾಡಿ ರಾಶಿ ಹಾಕಿದ್ದಾರೆ. ಕಲ್ಲಿನಲ್ಲಿ ಮಸಾಲೆ ವಸ್ತುಗಳನ್ನು ಒನಕೆಯಿಂದ ಪುಡಿ ಮಾಡುತ್ತಿದ್ದಾರೆ. ಹೀಗೆ ಎಲ್ಲವೂ ತಯಾರಾದ ಬಳಿಕ ಅದನ್ನು ಹೋರಾಟ ಮಾಡುವ ರೈತರಿಗೆ ಕೊಂಡು ಹೋಗಿ ಕೊಡುತ್ತಿದ್ದಾರೆ. ಹೋರಾಟ ಸ್ಥಳದಲ್ಲಿ ಈ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದ್ದು ಪಂಜಾಬಿನ ಭಾರತ ಕಿಸಾನ್ ಸಂಘರ್ಷ ಸಮಿತಿಯ ನಾಯಕ ಸುಖವೀಂದರ್ ಸಿಂಗ್ ಸಬ್ರಾರ ನೇತೃತ್ವದಲ್ಲಿ ಸಿಂಘುವಿನಲ್ಲಿ ಸ್ಥಾಪಿಸಲಾದ ಒಂದನೇ ಚಪ್ಪರದಲ್ಲಿ ಒಂದನೇ ಲಂಗರು ಆರಂಭವಾಯಿತು. ಅಲ್ಲಿಂದ 20 ಕಿಲೋಮೀಟರ್ ದೂರದವರೆಗೆ ಲಂಗರುಗಳಿವೆ.
ಹೋರಾಟಗಾರರಲ್ಲಿ ಆಹಾರದ ಅಭಾವದಿಂದಾಗಿ ಸ್ಥೈರ್ಯ ಕುಗ್ಗದಂತೆ ಈ ಲಂಗರುಗಳು ನೋಡಿಕೊಳ್ಳುತ್ತಿವೆ ವೇದಿಕೆಯಲ್ಲಿ ನಿರಂತರ ಭಾಷಣ ನಡೆಯುತ್ತಿದೆ. ಪ್ರತಿಭಟನಾಕಾರರಿಗೆ ಔತಣ ನೀಡಲು ಲಂಗರುಗಳ ನಡುವೆ ಸ್ಪರ್ಧೆಯೇ ನಡೆಯುತ್ತಿದೆ. ಚಾ,ಕಾಫಿ, ಪರೋಟ, ಚಪಾತಿ, ಚಾವಲ್ ಸಬ್ಜಿ, ನೂಡಲ್ಸ್, ಗಾಜರ್ ಹಲ್ವಾ, ಖೀರು ಹೀಗೆ ರುಚಿರುಚಿಕರವಾದ ಭಕ್ಷ್ಯಭೋಜನವಿದೆ.
ತಿಂಗಳು ಗಟ್ಟಲೆಗಾಗುವಷ್ಟು ಆಹಾರ ಧಾನ್ಯಗಳು ಇಲ್ಲಿ ಬಂದಾಗಿದೆ. ಆದರೆ, ಆಹಾರ ಪೂರೈಕೆಗೆ ಧಾನ್ಯಗಳನ್ನು ನೀಡಿರಿ ಎಂದು ಯಾರು ಕೇಳಿಲ್ಲ. ಪ್ರತಿಯೊಬ್ಬರು ಗೋಣಿಗಟ್ಟಲೆ ಆಹಾರದೊಂದಿಗೆ ಬರುತ್ತಿದ್ದಾರೆ. ಕೆಲವರಿಗೆ ಹೋರಾಟಗಾರರಿಗೆ ನೇರವಾಗಿ ಕೈಗೊಪ್ಪಿಸುವ ಆಶೆ. ಅವರ ಕೈಗೊಪ್ಪಿಸಿ ಅವರು ಹೊರಟು ಹೋಗುತ್ತಾರೆ. ಬಹುಭಾಗ ಜನರು ಲಂಗರುಗಳಲ್ಲಿ ಬಂದು ಇರುತ್ತಾರೆ. ಆಹಾರ ಧಾನ್ಯವಲ್ಲ ಹೋರಾಟದೊಂದಿಗೆ ಬೆಂಬಲ ರೈತರಿಗೆ ಬೇಕಾಗಿದೆ ಎಂದು ಸುಖ್‍ವೀರ ಸಿಂಗ್ ಹೇಳುತ್ತಾರೆ.
ಬೆಂಬಲಿಸಲು ಗಡಿಗೆ ಬರಬೇಕಾಗಿಲ್ಲ. ದೇಶದ ಯಾವ ಕಡೆಯೂ ಅದು ಸಾಧ್ಯವಿದೆ. ಅದಾನಿ, ಅಂಬಾನಿಯ ಉತ್ಪನ್ನ ಸೇವೆಗಳನ್ನು ತಿರಸ್ಕರಿಸಿ ಈ ಹೋರಾಟವನ್ನು ಎಲ್ಲರೂ ಬೆಂಬಲಿಸೋಣ ಎಂದು ಅಮಿತ್ ಶಾರ ಜೊತೆ ಚರ್ಚೆಗೆ ಹೋದ ಹನನ್ ಮುಲ್ಲ ಹೇಳಿದರು. ಇದು ಕೇವಲ ರೈತ ನಾಯಕರ ಮನಸ್ಸಲ್ಲ. ಹೋರಾಟ ಸ್ಥಳದಲ್ಲಿ ಕಾಣುವ ಎಲ್ಲ ರೈತರು ಹೀಗೆ ಮಾತಾಡುತ್ತಿದ್ದಾರೆ. ಅದಾನಿ, ಅಂಬಾನಿಯನ್ನು ಬಹಿಷ್ಕರಿಸುವ ಅಗತ್ಯವನ್ನು ಎಲ್ಲರೂ ಹೇಳುತ್ತಿದ್ದಾರೆ.












