ಸನ್ಮಾರ್ಗ ವಾರ್ತೆ
ಅಬುಧಾಬಿ,ಡಿ.11: ಯುಎಇಯ ಪ್ರಮುಖ ಪಬ್ಲಿಕ್ ಸರ್ವಿಸ್ ಬ್ರಾಡ್ಕಾಸ್ಟ್ ಅಬುಧಾಬಿ ಮೀಡಿಯ ಮತ್ತು ಇಸ್ರೇಲಿನ ಅಂತಾರಾಷ್ಟೀಯ ವಾರ್ತಾ ಶೃಂಖಲೆ ಐ 24 ನ್ಯೂಸ್ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ಒಪ್ಪಂದ ಪ್ರಕಾರ ವರದಿಗಳು, ಲೈಬ್ರರಿ ಇತ್ಯಾದಿ ಹಂಚಿಕೊಳ್ಳಲಾಗುವುದು. ಪ್ರೊಡಕ್ಷನ್ ಹಸ್ತಾಂತರ ಇತ್ಯಾದಿಗಳಲ್ಲಿ ಎರಡು ಮಾಧ್ಯಮ ಕಂಪೆನಿಗಳು ಪರಸ್ಪರ ಸಹಕರಿಸಲಿವೆ.
ವಾರ್ತೆ, ಟಿವಿ ಪ್ರಸಾರ ತಂತ್ರಜ್ಞಾನ ಕ್ಷೇತ್ರದ ಹೊರತು ರಾಷ್ಟ್ರೀಯ ವರದಿಗಾರಿಕೆ, ಡಾಕ್ಯುಮೆಂಟರಿ ಆರ್ಕೈವ್ ಮೆಟರೀಯಲ್ಸ್ ಹಂಚಿಕೊಳ್ಳಲಿವೆ. ಉನ್ನತ ಮಟ್ಟದ ಪ್ರೊಫೆಸಲಿಸಂ, ವೈವಿಧ್ಯಯುತ ಗುಣಮಟ್ಟದ ಸಾರಾಂಶದ ಭರವಸೆ ನೀಡಲಾಗಿದೆ.
ಪ್ರಾದೇಶಿಕ, ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಮಾಧ್ಯಮ ವ್ಯವಸ್ಥೆಗಳೊಂದಿಗೆ ದೃಢವಾದ ಸಂಬಂಧವನ್ನು ಸ್ಥಾಪಿಸುವುದು ಯುಎಇಯ ಪ್ರತಿ ಬದ್ಧತೆ ಮತ್ತು ಆಕಾಂಕ್ಷೆಯಾಗಿದ್ದು ಇದನ್ನು ಈ ಒಪ್ಪಂದ ಪ್ರತಿಫಲಿಸುತ್ತಿದೆ ಎಂದು ಅಬುಧಾಬಿ ಮೀಡಿಯಂ ಆಕ್ಟಿಂಗ್ ಜನರಲ್ ಮ್ಯಾನೇಜರ್ ಅಬ್ದುಲ್ ರಹೀಂ ಅಲ್ ಬತೀಹ್ ಅಲ್ ನುವೈಮಿ ಹೇಳಿದರು. ಯುಇಎ, ಇಸ್ರೇಲಿನ ನಡುವಿನ ರಾಜತಾಂತ್ರಿಕ ಸಂಬಂಧ ಏರ್ಪಟ್ಟ ಬಳಿಕ ಸುದ್ದಿ ಸಂಸ್ಥೆಗಳ ಒಪ್ಪಂದ ಸಾಧ್ಯವಾಗಿದೆ.












