ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್,ಡಿ.26: ಕೇರಳದಲ್ಲಿ ಇನ್ನೂ ತಲವಾರು ರಾಜಕೀಯ ಆಗಬಾರದು ಎಂದು ಎಸ್ವೈಎಸ್ ಕೇರಳ ಉಪಾಧ್ಯಕ್ಷ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಪುತ್ರ ಡಾ. ಎಪಿ ಅಬ್ದುಲ್ ಹಕೀಂ ಅಝ್ಹರಿ ಹೇಳಿದ್ದಾರೆ. ರಾಜಕೀಯ ಕೊಲೆ ನಿಲ್ಲಿಸಬೇಕಾದದ್ದು ರಾಜಕೀಯ ನಾಯಕರು. ಕ್ರಿಮಿನಲ್ಗಳಾದ ಕಾರ್ಯಕರ್ತರು ಪಾರ್ಟಿಗಳಲ್ಲಿ ಬೆಳೆದು ಬರುವುದು ಮತ್ತು ನಿಷ್ಕಳಂಕರಾದ ಯುವಕರು ಕೊಲೆಯಾಗುತ್ತಿದ್ದಾರೆ. ಇಂತಹ ಅಕ್ರಮಿಗಳನ್ನು ಬೆಂಬಲಿಸುವ ಮೂಲಕ ಪಾರ್ಟಿಗಳು ಕ್ರೂರ ಕೃತ್ಯವನ್ನು ಬೆಂಬಲಿಸುವ ಕೆಲಸ ಮಾಡುತ್ತವೆ ಎಂದು ಅಬ್ದುಲ್ ಹಕೀಂ ಅಝ್ಹರಿ ಹೇಳಿದರು.
ಆರೋಪಿಗಳು ರಾಜಕೀಯ ಪಾರ್ಟಿಗಳು ಹಣ, ಅಧಿಕಾರದಿಂದ ಸಂರಕ್ಷಿಸುವುದು ಕೇರಳದಲ್ಲಿ ಕಾಣಿಸುತ್ತಿದೆ. ಇಂಥ ಪ್ರವೃತ್ತಿಗಳು ಮುಂದುವರಿದರೆ ನಾಡಿನಲ್ಲಿ ಶಾಂತಿ ಉಂಟಾಗದು. ಮುಂದಿನ ತಲೆಮಾರು ಇದನ್ನು ಮಾಡುತ್ತಾ ಇರಬಹುದು ಎಂದು ಅವರು ಹೇಳಿದರು. ಯಾವುದೇ ತಪ್ಪಿನಲ್ಲಿ ಭಾಗಿಯಾದ ನಿರಪರಾಧಿ ಯುವಕ ಕಾಂಞಂಗಾಡಿನಲ್ಲಿ ಕೊಲೆಯಾಗಿದ್ದು. ಚುನಾವಣೆಯಲ್ಲಿ ಭಾಗಿಯಾಗಿದ ತಪ್ಪನ್ನು ಅಬ್ದುರ್ರಹ್ಮಾನ್ ಔಫ್ ಮಾಡಿದ್ದು. ಗರ್ಭಿಣಿಯಾದ ಪತ್ನಿಯ ಚಿಕಿತ್ಸೆಗೆ ಗೆಳೆಯನಿಂದ ಹಣ ಪಡೆದು ಬರುತ್ತಿದ್ದಾಗ ಔಫ್ನ ಮೇಲೆ ಹಲ್ಲೆ ನಡೆಯಿತು.
ಇಸ್ಲಾಮಿಗಾಗಿ ಕೆಲಸ ಮಾಡಿದ ಕಾರಣದಿಂದ ಸುನ್ನಿ ಕಾರ್ಯಕರ್ತರ ಮೇಲೆ ನಡೆಯುವ ಕ್ರೂರ ಕೃತ್ಯಗಳು ಡಝನ್ಗೂ ಮಿಕ್ಕಿದೆ. ಸುನ್ನಿ ಕಾರ್ಯಕರ್ತರು ಅಕ್ರಮಗಳಿಗೆ ಅದೇ ರೀತಿ ಉತ್ತರ ನೀಡಲು ಮುಂದಾಗಬಾರದು. ಒಳಿತಿನಿಂದ ಮಾತ್ರ ಪ್ರತಿರೋಧಿಸುವ ರೀತಿಯನ್ನು ಪವಿತ್ರ ಕುರ್ಆನ್ ಪ್ರವಾದಿ ಮುಹ್ಮದರು(ಸ) ಕಲಿಸಿರುವುದು ಎಂದು ಅಬ್ದಲ್ ಹಕೀಂ ಅಝ್ಹರಿ ಹೇಳಿದ್ದಾರೆ.












